ರಾಮದುರ್ಗ:- ತಾಲೂಕು ಆಡಳಿತ , ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ರಾಮದುರ್ಗ ಪಟ್ಟಣದಲ್ಲಿ ಬರುವಂತಹ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ ಮಾಡಲಾಯಿತು.
ಕಚೇರಿ ಹಾಗೂ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರು ಈ ಮೂಲಕ ನಮ್ಮ ಕೆಲಸ ಮತ್ತು ನಮ್ಮ ಜೀವನದಲ್ಲಿ ಸಂವಿಧಾನದ ಪೀಠಿಕೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಪಾಲಿಸುವಲ್ಲಿ ಬದ್ಧರಾಗಿರಲು ಪ್ರತಿಜ್ಞೆ ಮಾಡುತ್ತೇವೆ ಎಂದು ಮಾಡಿದರು.
ಅದೇ ರೀತಿಯಾಗಿ ತಾಲೂಕು ಆಡಳಿತಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭಾರತದ ಪ್ರಜಾಪ್ರಭುತ್ವದ ಪೀಠಿಕೆಯ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆ ಹೇಳಿದರು ಹಾಗೂ ಎಲ್ಲರೂ ಒಂದಾಗಿ ಏಕತೆಯಿಂದ ಸೌಹಾರ್ದತೆಯಿಂದ ಹಾಗೂ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಅಭಿವೃದ್ಧಿಪಡಿಸುತ್ತಾ ಯಾವುದೇ ಜಾತಿ ಧರ್ಮ ಭೇದಭಾವ ಇಲ್ಲದೆ ಸೌಜನ್ಯತೆಯಿಂದ ಕೂಡಿ ಬಾಳಬೇಕು ಎಂದರು.
ಈ ಕಾರ್ಯಕ್ರಮಕದಲ್ಲಿ ಸರಕಾರಿ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆ ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕಲಾದಗಿ