ಮಾನ್ವಿ ತಾಲೂಕಲ್ಲಿ ಕಾನೂನು ಸತ್ತೋಗಿದ್ದರಿಂದ ಅಕ್ರಮ ಮರಳು ದಂಧೆ ನಡೆತಿದೆ
ತುಂಗಭದ್ರಾ ನದಿಗೆ ಜೆಸಿಬಿ,ಇಟಾಚಿಗಳ ಸದ್ದೆ ಹೆಚ್ಚು
ರಾಯಚೂರು ಗಣಿ ಅಧಿಕಾರಿ ಪುಷ್ಪಲತಾ ಶಾಮೀಲಾಗಿದ್ದಾರಾ
ಗಣಿ ಅಧಿಕಾರಿ ಮಹಾದೇವಸ್ವಾಮಿ ಕಣ್ಣಿದ್ದು ಕುರುಡರಾಗಿದ್ದಾರಾ
ಅಕ್ರಮ ದಂಧೆ ಮಾಡೋರು ಮಾನ್ವಿಗೆ ಬನ್ನಿ
ಮಾನ್ವಿ: ಅಕ್ರಮ ದಂಧೆ ಯಾವ ರೀತಿ ನಡೆಯುತ್ತಿದೆ ಎಂದು ಕೆಜಿಎಫ್ ಫಿಲ್ಮ್ ನಲ್ಲಿ ನಾವು ನೋಡಿದ್ದೇವೆ.ಅದೆ ರೀತಿಯಲ್ಲಿ ಮಾನ್ವಿ ತಾಲೂಕಿನ ಚೀಕಲಪರ್ವಿ, ಯಡಿವಾಳ, ಮದ್ಲಾಪುರ,ಉಮಳಿ ಪನ್ನೂರು,ಜೂಕೂರು ಗ್ರಾಮದಿಂದ ಹಾದುಹೋದ ತುಂಗಭದ್ರಾ ನದಿಯಲ್ಲಿ ರಾತ್ರಿ ಮತ್ತು ಹಗಲು ರಾಯಲ್ಟಿ ಇಲ್ಲದೆ ಜೆಸಿಬಿ,ಇಟಾಚಿ ಮೂಲಕ ಟಿಪ್ಪರ್ ಗಳಲ್ಲಿ ಮರಳು ಮಾಫಿಯಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಮಾನ್ವಿಯಲ್ಲಿ ಕಾನೂನು ಅನ್ನೋದು ಸತ್ತೋಗಿದ್ದರಿಂದ ರಾಯಲ್ಟಿ ಇಲ್ಲದೆ ರಾಜಾರೋಷವಾಗಿ ಯಾರ ಮುಲಾಜಿಲ್ಲದೆ ಮೀಸೆ ಮೂಡದ ಕುನ್ನಿಗಳು ಟಿಪ್ಪರ್ ತಂದು ಮರಳು ಮಾಫಿಯಾ ದಂಧೆಗಿಳಿದಿದ್ದಾರೆ.
ಗಣಿ ಅಧಿಕಾರಿ ಪುಷ್ಪಲತಾ ಮತ್ತು ಮಹಾದೇವಸ್ವಾಮಿ ಕಣ್ಣಿದ್ದು ಕುರುಡರಾಗಿದ್ದರಿಂದ ಅಕ್ರಮವಾಗಿ ನದಿಗಳಲ್ಲಿ ರಸ್ತೆ ಮಾಡಿಕೊಂಡು ದೇಶದ ಸಂಪತ್ತಿಗೆ ಕನ್ನ ಹಾಕಿದರು ಕಾನೂನು ಸತ್ತೋಗಿದ್ದರಿಂದ ಮಾನ್ವಿಯಲ್ಲಿ ಮುಂದೊಂದು ದಿನ ಕೆಜಿಎಫ್ ಫಿಲ್ಮ್ ಭಾಗ 3 ಮಾಡುವುದರಲ್ಲಿ ಎರಡನೆ ಮಾತೇ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಜಿದ್ ಖಾದ್ರಿ ಗುಡುಗಿದ್ದಾರೆ.