Join The Telegram | Join The WhatsApp |
ಬೆಳಗಾವಿ : ಮಂಗಳವಾರ ದಿನಾಂಕ 06/12/22 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ಬೇಟಿ ನೀಡಿ, ಆಡಳಿತ ಕಾರ್ಯವೈಖರಿಯ ಪರಿಶೀಲನೆ ಮಾಡಿದರು..
ಈ ವೇಳೆ ಬೆಳಗಾವಿಯ ಮಹಾನಗರ ಪಾಲಿಕೆಗೆ ಬೇಟಿ ನೀಡಿದ ಶಾಸಕರು ಮೊದಲಿಗೆ ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾನದ ದಿನವಾದ ಇಂದು ಅವರ ಭಾವಚಿತ್ರಕ್ಕೆ ನಮಿಸಿ, ಪುಷ್ಪಾರ್ಚನೆ ಮಾಡಿದರು..
ನಂತರ ಪಾಲಿಕೆಯ ಆಯುಕ್ತರ ಕಚೇರಿಗೆ ಆಗಮಿಸಿದ ಅವರೊಂದಿಗೆ ಹಲವಾರು ನಗರ ಸೇವಕರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರೂ ಆಗಮಿಸಿದರು…
ಈ ವೇಳೆ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳ ವಿರುದ್ಧ ತಮ್ಮ ತಮ್ಮ ಕೆಲಸ ಮಾಡದೆ ಇರುವದಕ್ಕೆ ಹತ್ತಾರು ರೀತಿಯಲ್ಲಿ ದೂಷಣೆ ಮಾಡಿದರು, ಸಾರ್ವಜನಿಕರ ಕೆಲಸ ಮಾಡುವ ವಿಷಯದಲ್ಲಿ ಅಧಿಕಾರಿಗಳು ರಾಜಕೀಯ ಮಾಡುತ್ತಾರೆ, ಪಕ್ಷ, ಹಣನೋಡಿ ಬೇಧಭಾವ ಮಾಡುತ್ತಾ ಕೆಲಸ ಮಾಡುತ್ತಾರೆ ಎಂದು ಆರೋಪಗಳ ಸುರಿಮಳೆ ಮಾಡಿದರು…
ಇದೆಲ್ಲವನ್ನೂ ಆಲಿಸಿದ ಶಾಸಕರು ಸಂಭಂಧಿಸಿದ ಅಧಿಕಾರಿಗಳನ್ನು ಕರೆದು ಸಾರ್ವಜನಿಕರ ಮುಂದೆಯೇ ತರಾಟೆಗೆ ತೆಗೆದುಕೊಂಡು, ಶಾಂತ ಚಿತ್ತದಿಂದ ಬುದ್ದಿಹೇಳಿ, ಸಾರ್ವಜನಿಕ ಕಾರ್ಯದಲ್ಲಿ ಈ ರೀತಿಯಾದ ವಿಳಂಬ ಮಾಡದೇ ಸೇವೆ ಮಾಡಿ ಎಂಬ ಕಿವಿಮಾತು ಹೇಳಿದರು..
ಅದೇ ರೀತಿ ತಮಗೆ ಹಾಗೂ ತಮ್ಮ ಜನತೆಗೆ ಸಂಭಂದಪಟ್ಟ, ನೆನೆಗುದಿಗೆ ಬಿದ್ದಿದ್ದ ಹಲವಾರು ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿಳಂಬಕ್ಕೆ ಕಾರಣ ತಿಳಿದು, ಪರಿಹಾರೋಪಾಯದ ಬಗ್ಗೆ ಮಾತನಾಡಿ, ಆದಷ್ಟೂ ಬೇಗ ಆ ಕೆಲಸಗಳು ಪೂರ್ಣವಾಗುವಂತೆ ತಾಕೀತು ಮಾಡಿದರು…
ಅಂಬೇಡ್ಕರ ಪರಿನಿರ್ವಾಣದ ದಿನದ ಬಗ್ಗೆ ಮಾತನಾಡಿದ ಅವರು ಸಂವಿಧಾನ ಇದೆ ಎಂಬ ಕಾರಣಕ್ಕೆ ನಾವಿಂದು ತಲೆ ಎತ್ತಿ ಬದುಕುತ್ತಿದ್ದೇವೆ ಎಂದು ಬಾಬಾಸಾಹೇಬರ ಹಾಗೂ ಸಂವಿಧಾನದ ಮಹತ್ವ ಸಾರಿದರು….
ಈ ಸಂಧರ್ಭದಲ್ಲಿ ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಕಾರ್ಯಕರ್ತರು, ಸಾರ್ವಜನಿಕರು, ಶಾಸಕರ ಬೆಂಬಲಿಗರು ಇನ್ನು ಹಲವಾರು ಜನರು ಉಪಸ್ಥಿತರಿದ್ದರು…
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |