Join The Telegram | Join The WhatsApp |
ಸೇಡಂ: ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕ ವತಿಯಿಂದ ಮುಧೋಳ್ ವಲಯ ವ್ಯಾಪ್ತಿಯಲ್ಲಿ ಬರುವ ಗಡಿ ಭಾಗದ ಪ್ರದೇಶದಲ್ಲಿರುವ ನಮ್ಮ ಕರ್ನಾಟಕಕ್ಕೆ ಸಂಬಂಧಪಟ್ಟ ಗ್ರಾಮವಾದ ಮಲ್ಲಬಾದ್ ಗ್ರಾಮದಲ್ಲಿ ಇಂದು ಜಯ ಕರ್ನಾಟಕ ಜನಪರ ವೇದಿಕೆ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಹಾಗೂ ಊರಿನ ಶಾಲಾ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸಿ ಹಾಗೂ ಕನ್ನಡವನ್ನು ಬೆಳೆಸುವಂತೆ ಹಾಗೂ ಇತರ ಭಾಷೆಯನ್ನು ಗೌರವಿಸುವಂತೆ ಮತ್ತು ಸರಕಾರದ ಸೌಲಭ್ಯಗಳು ಸಿಗದ ಮುಖ್ಯ ಕಾರಣ ಭಾಷೆ ಕೊರತೆ ಇದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ವರದಾ ಸ್ವಾಮಿ ಬೀ ಹಿರೇಮಠ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ವರದಾ ಸ್ವಾಮಿ ಬೀ ಹಿರೇಮಠ, ತಾಲೂಕ ಕಾರ್ಯದಕ್ಷರಾದ ಚಂದ್ರಶೇಖರ್ ಸ್ವಾಮಿ, ತಾಲೂಕ ವಕ್ತಾರರಾದ ಅಶೋಕ್ ಪರಿವರ್, ಚನ್ನಕೇಶವ ರೆಡ್ಡಿ, ಕಾಶಪ್ಪ, ರಮೇಶ್, ಗೌಡಯ್ಯ, ಅಶೋಕ್, ಬಾಲನಾಯಕ್, ಮಹೇಂದ್ರ, ಅನಿಲ್ ರೆಡ್ಡಿ ಮುನ್ನೂರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |