Join The Telegram | Join The WhatsApp |
ಬೆಳಗಾವಿ ಮಂಗಳವಾರ ನಗರದ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಸರ್ಕಾರವು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿನ ಮಾಡುತ್ತಿರುವ ವಿಳಂಬಕ್ಕೆ ತುಂಬಾ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು..
ಸರ್ಕಾರ ಕಳೆದ 29 ನೇ ತಾರೀಖಿನ ಅಧಿವೇಶನದ ಸಮಯದಲ್ಲಿ ತರಾತುರಿಯಾಗಿ, ನಮ್ಮ ಸಮುದಾಯದ ಜನರನ್ನು ಶಾಂತಪಡಿಸಲು 2D ಮೀಸಲಾತಿ ಅಂತಾ ಘೋಷಣೆ ಮಾಡಿದರು..
ಆದರೆ ಅದರ ಬಗ್ಗೆ ವಿಶ್ಲೇಷಣೆ ಮಾಡಿದಾಗ ಅದರಲ್ಲಿ ಯಾವ ಅಂಶವು ಸ್ಪಷ್ಟತೆ ಇರಲಿಲ್ಲ. ನಮ್ಮ ನ್ಯಾಯವಾದಿಗಳು, ಪ್ರಮುಖ ಪದಾಧಿಕಾರಿಗಳು ಎಲ್ಲರೂ ಸೇರಿ ಚರ್ಚೆ ಮಾಡಿದಾಗ, ಅದರಲ್ಲಿ ಯಾವ ಅನುಕೂಲ ಹಾಗೂ ಮಹತ್ವಕಾರಿ ಅಂಶ ಇಲ್ಲದೆ ಇರುವದು ಕಂಡುಬಂದಿದ್ದು, ಆ ಮೀಸಲಾತಿ ಘೋಷಣೆಯನ್ನು ನಾವು ಸಂಪೂರ್ಣ ತಿರಸ್ಕರಿಸಿದ್ದೇವೆ ಎಂದರು..
ಮುಖ್ಯಮಂತ್ರಿಗಳು ತಾಯಿ ಆನೆ ಮಾಡಿ ನಮಗೆ ಕೊಟ್ಟ ಮಾತು ತಪ್ಪಿದ್ದಾರೆ, ಸುಳ್ಳು ಹೇಳುತ್ತಾ ಇಡೀ ಸಮುದಾಯಕ್ಕೆ ಆಸೆ ತೋರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ, ಆದರೆ ನಾವು ಕೂಡಾ ಸುಮ್ಮನೆ ಕೂಡುವುದಿಲ್ಲ, ಇದೇ 12 ನೆಯ ತಾರೀಖಿನ ಒಳಗೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಒಳ್ಳೆಯದು, ಇಲ್ಲವಾದರೆ ಜನೆವರಿ 13ನೆ ತಾರಿಖಿನಿಂದ ಸಿ ಎಂ ಮನೆಯ ಮುಂದೆಯೇ, ಸಮುದಾಯದ ಜನಸಾಗರದ ಜೊತೆ ಪ್ರತಿಭಟನೆ ಕೂರುತ್ತೇನೆ ಎಂದರು..
ಇನ್ನು ಈ ಮೀಸಲಾತಿಯ ವಿಳಂಬಕ್ಕೆ ಪಕ್ಷಾತೀತವಾಗಿ ಕೆಲ ನಾಯಕರು ಕಾರಣರಾಗಿರುವರು, ಅಂತಾ ರಾಜಕೀಯ ನಾಯಕರಿಗೆ ಭವಿಷ್ಯದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು, ಮೀಸಲಾತಿಗೆ ಅಡ್ಡಲಾಗಿರುವ ರಾಜಕೀಯ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು..
ಇದೇ 13ನೆಯ ತಾರೀಖಿನ ದಿನದಂದು ಮೀಸಲಾತಿಗೆ ಅಡ್ಡ ಆಗಿರುವ ಜನಪ್ರತಿನಿಧಿಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಹಾಗೂ ಅವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು…
ಈ ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಪಂಚನಾಗೌಡರು, ನ್ಯಾಯವಾದಿ ಆರ್ ಕೆ ಪಾಟೀಲ್, ಯುವ ಸಮಾಜ ಸೇವಕ ಗುಂಡು ಪಾಟೀಲ, ಇನ್ನೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು…
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |