Join The Telegram | Join The WhatsApp |
ಮುದಗಲ್: ನೂತನ ಅಧ್ಯಕ್ಷೆಯಾಗಿ ರಾಬಿಯಾ ಬೇಗಂ ಹುಸೇನ್ ಅಲಿ, ಉಪಾಧ್ಯಕ್ಷೆರಾಗಿ ಜಯಶ್ರೀ ಶಂಕ್ರಪ್ಪ ಜೀಡಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲಿಂಗಸೂರು (ತಹಸೀಲ್ದಾರ್) ಬಲರಾಮ್ ಕಟ್ಟಿಮನಿ ಘೋಷಿಸಿದರು.
ಇತ್ತೀಚೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಆ ಖಾಲಿ ಸ್ಥಾನಕ್ಕೆ ಇದು ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು.
ಅಧ್ಯಕ್ಷ-ಉಪಾಧ್ಯಕ್ಷ
ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲಿಂಗಸೂರು ಕ್ಷೇತ್ರದ ಶಾಸಕರಾದ ಡಿ .ಎಸ್ ಹುಲಗೇರಿ ಮುಖ್ಯಾಧಿಕಾರಿ
ಪರುಶುರಾಮ ನಾಯಕ, ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ದೌವೂದ ಸಾಬ, ಮಹಾಂತೇಶ ಪಾಟೀಲ್, ಅಶ್ಮೀರ್ ಬೆಳ್ಳಿಕಟ್ಟಿ, ಶ್ರೀಕಾಂತ್ ಪಾಟೀಲ್, ತಮ್ಮಣ್ಣ ಗುತ್ತೆದರ್, ಸತೀಶ್ ಭೋವಿ, ಪರಮಣ್ಣ ಕನ್ನಾಪೂರ ಹಟ್ಟಿ,ರಘುವೀರ್ ಚಲುವಾದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |