This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಸಾಮರಸ್ಯಕ್ಕೆ ಧಕ್ಕೆ- ಸಹಿಸುವುದಿಲ್ಲ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ…

Join The Telegram Join The WhatsApp

ಮುದಗಲ್ ಡಿ 28- ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಲಿಂಗಸುಗೂರು ವಿಧಾಸಭಾ ಕ್ಷೇತ್ರದ
ವ್ಯಾಪ್ತಿಯಲ್ಲಿ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಸಮಾವೇಶ ಬುಧುವಾರ ಪುರಸಭೆ ಆವರಣದಲ್ಲಿ
ಸಾಯಂಕಾಲ ಜರುಗಿತು.

ವೇದಿಕೆ ಕಾರ್ಯಕ್ರಮ ನಡೆದ ಪುರಸಭೆ ಯ ಮೈದಾನಕ್ಕೆ ಜನಸಾಗರವೇ ಹರಿದು ಬಂದಿತ್ತು. ಮುಖ್ಯ ರಸ್ತೆಗಳೆಲ್ಲ ಮೆರವಣಿಗೆ , ಡೊಳ್ಳು, ಕುಣಿತ ಸೇರಿದಂತೆ ಮೆರವಣಿಗೆಯ ಮೂಲಕ ಜಾತ್ಯಾತೀತ ಜನತಾದಳ ಪಕ್ಷದ
ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಸಂಬ್ರಮ ದಿಂದ ವೇದಿಕೆಗೆ ಬರ ಮಾಡಿಕೊಂಡುರು.

ನಂತರ ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ.ಇಬ್ರಾಹಿಂ ರವರು ಜ್ಯೋತಿ ಬೆಳಗುವ ಮೂಲಕ ಕಾರ್ಯ ಕ್ರಮದ ಉದ್ಘಾಟನೆ ಮಾಡಿದರು. ಪ್ರಾಸ್ತಾವಿಕವಾಗಿ ಯುವ ಘಟಕ
ಅಧ್ಯಕ್ಷ ಮುಖಂಡರಾದ ದೊಡ್ಡಸಿದ್ದಯ್ಯ ಮೇಗಳಪೇಟೆ, ಮಾತನಾಡಿದರು.ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ …ಆಗಿನ ಮಂತ್ರಿ ಎಚ್, ಡಿ ಕುಮಾರ ಸ್ವಾಮಿ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವರ ಜೊತೆಗೆ ಅನೇಕ ಜನಪರ ಯೋಜನೆಗಳು ಜಾರಿಗೆ ಮಾಡಿದ್ದಾರೆ ಅದೆ ರೀತಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರಿ ನೀಡಿದರೆ ಪಂಚರತ್ನ ಯೋಜನೆಗಳು ರಾಜ್ಯದ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವ ಯೋಜನೆ ಎಂದರೆ ಅದು ಪಂಚ ರತ್ನ ಯೋಜನೆ ಆಗಿದ್ದು ಜನತಾದಳ ಅಧಿಕಾರಕ್ಕೆ ಬಂದಲ್ಲೇ ಪಂಚರತ್ನ ಯೋಜನೆ ಅನುಷ್ಠಾನದಿಂದ ರಾಜ್ಯದ ಸರ್ವಾಂಗಿನ ಪ್ರಗತಿ ಆಗಲಿದೆ ಎಂದರು .ನಂತರ ಮಾತನಾಡಿದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ…

ಸಾಮರಸ್ಯಕ್ಕೆ ಧಕ್ಕೆ- ಸಹಿಸುವುದಿಲ್ಲ ಎಂದ ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ನೀಡಿದರೆ ಸಮಾಜದಲ್ಲಿನ ಸಾಮರಸ್ಯ ಹಾಗೂ ಭಾವೈಕ್ಯ ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ದೇಶ ಹಾಗೂ ರಾಜ್ಯಕ್ಕೆ ಬಂದೊದಗಿರುವ ಆಪತ್ತು ತೊಡೆದು ಹಾಕುತ್ತೇವೆ’ ಮುಸ್ಲಿಮರ ಎಲ್ಲಾ ಬೇಡಿಕೆ ಈಡೇರಿಸುವ ಸಮಯ ಬರಲಿದೆ‌. ಅದಕ್ಕೆ ಅಲ್ಪಸಂಖ್ಯಾತರ ಸಹಕಾರ ಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ಸಿಗರಿಗೆ ಚುನಾವಣೆ ಸಮಯದಲ್ಲಿ ಮಾತ್ರ ಮುಸ್ಲಿಮರು ನೆನಪಾಗುತ್ತಾರೆ ಸಮಸ್ಯೆ ಬಂದಾಗ ನೆರವಿಗೆ ಹೋಗಲಿಲ್ಲ. ಸಿಎಎ ವಿಚಾರದಲ್ಲಿ ಹೆದರಿದರು ಹಿಜಾಬ್, ಹಲಾಲ್ ವಿಚಾರದಲ್ಲಿ ಮಾತನಾಡ ಬೇಡಿ‌ ಎಂಬುದಾಗಿ ತಮ್ಮ ಪಕ್ಷದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.
ಇಡೀ ಭಾರತದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದು ಕುಮಾರಸ್ವಾಮಿ ಮಾತ್ರ’ ಎಂದರು ಸಿದ್ದರಾಮಯ್ಯನವರೇ, ನಿಮಗೂ ಒಕ್ಕಲಿಗರಿಗೂ ಆಗಿಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮುಸ್ಲಿಮರು ಹಾಗೂ ಒಕ್ಕಲಿಗರ ನಡುವೆ ಏಕೆ ತಂದು ಹಾಕುತ್ತಿದ್ದೀರಿ’ಹಿಂದೂ–ಮುಸಲ್ಮಾನರು ಒಂದೆ ತಾಯಿಯ ಮಕ್ಕಳಂತೆ ಬದುಕಬೇಕು. ಕುಮಾರಣ್ಣ ವಿಧಾನ ಸೌಧವನ್ನು ಬಸವಣ್ಣನ ಕಾಲದ ಅನುಭವ ಮಂಟಪವಾಗಿಸುತ್ತಾರೆ.

 

ನಂತರ ಸಮಾವೇಶ ಉದ್ದೇಶಿಸಿ ನಾಜ್ಮಾ ನಜೀರ್ ಮಾತನಾಡಿದ..‌ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಆದರೆ ಈ ತೋಟಕ್ಕೆ ಬೆಂಕಿ ಬಿದ್ದಿದೆ. ಬಿಜೆಪಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್ ಪೆಟ್ರೋಲ್ ಸುರಿಯುತ್ತಿದೆ. ಇಬ್ಬರಿಗೂ ಶಾಂತಿ ಬೇಕಾಗಿಲ್ಲ. ವ್ಯಾಪಾರ ವಹಿವಾಟುಗಳಲ್ಲಿ ಹಿಂದೂ ಮುಸಲ್ಮಾನರ ನಡುವೆ ಪರಸ್ಪರ ಸಹಕಾರ ಅನಿವಾರ್ಯ. ಆದರೆ ಬಿಜೆಪಿ ಅಧಿಕಾರಕ್ಕಾಗಿ ಅಮಾಯಕ ಯುವಕರಿಗೆ ಧರ್ಮದ ಅಮಲು ಏರಿಸುತ್ತಿದೆ’ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಈ ಬಾರಿ ತಿರಸ್ಕರ ಮಾಡಿ ಸರ್ವಜಾತಿಯ ಉದ್ಧಾರಕ್ಕಾಗಿ ಅಲ್ಪಸಂಖ್ಯಾತ ರ ಅಭಿವೃದ್ಧಿಗಾಗಿ ಇರುವ ಜಾತ್ಯಾತೀತ ದಳ ಪಕ್ಷಕ್ಕೆ ಅಧಿಕಾರ ನೀಡಿ, ಈ ಬಾರಿ ಲಿಂಗಸೂರು ಕ್ಷೇತ್ರಕ್ಕೆ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿರುವ ನಿಮ್ಮೆಲ್ಲರ ಮನೆಮಗನಾದ ಸಿದ್ದು ಬಂಡಿ ಯವರನ್ನು ಮುಂದಿನ 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸೆರಗು ಇಡಿದು ಕೇಳಿಕೊಳ್ಳುತ್ತೇನೆ ಎಂದರು.

ನಂತರ ವೇದಿಕೆ ಉದ್ದೇಶಿಸಿ ಮಾತನಾಡಿದ ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ,
ಯವರು ನನಗೆ ನಿಮ್ಮ ಪ್ರೀತಿ ಸಾಕು , ನಾನು ನಿಮ್ಮ ಮನೆಯ ಮಗ ದಯವಿಟ್ಟು ನನ್ನನ್ನು ಇ ಬಾರಿ ಗೆಲ್ಲಸಿ ಈ ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿ ಮಾಡಲು ಅವಕಾಶ ನೀಡಬೇಕು ಎಂದು ವೇದಿಕೆಯಲ್ಲಿಯೇ ಕಣ್ಣೀರಾಕಿ ಜನರ ಬಳಿ ಮುಂದಿನ ಚುನಾವಣೆಯಲ್ಲಿ ಗೆಲ್ಲುಸಿ ಎಂದು ಕಣ್ಣೀರಾಕುತ್ತಲೇ ಮಾತನಾಡಿದರು..

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ, ದೊಡ್ಡಸಿದ್ದಯ್ಯ ಮೇಗಳಪೇಟೆ, ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ವಿರುಪಾಕ್ಷ, ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ಮುತ್ತಮ್ಮ ತಾಲ್ಲೂಕು ಕಾರ್ಯಾಧ್ಯಕ್ಷ ಗೋವಿಂದ, ಮುದಗಲ್ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮೈಬೂಬಸಾಬ ಕಟ್ಟಿಪುಡ್ಡಿ, ಯುವ ಘಟಕ ಅಧ್ಯಕ್ಷ
ಅನ್ವರ್ ಮೀಯಾ ಕಂದಗಲ್, ಪುರಸಭೆ ಮಾಜಿ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಹುಲುಗಪ್ಪ ಗುರುಗುಂಟಾ, ಅರುಣ ಕುಮಾರ ಸೇರಿದಂತೆ ಜೆಡಿಎಸ್ ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ


Join The Telegram Join The WhatsApp
Bharath Vaibhav
the authorBharath Vaibhav

Leave a Reply