ಚಿಂಚೋಳಿ:ಕಲ್ಬುರ್ಗಿ ನಗರದ ವಿಧಾನಸಭಾದ ಎದುರುಗಡೆ ಮಾದಿಗ ಸಮಾಜದ ಮುಖಂಡರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಘಟನೆಯನ್ನು ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ನೀಡಲಾಯಿತು ಕಲಬುರಗಿಯಲ್ಲಿ ಇವರು ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ಪರಿಶಿಷ್ಟ ಜಾತಿಯ ಮಹಿಳೆಯ ಸಾವಿನ ಕುರಿತು ತಕ್ಷಣದ ತನಿಖೆ ನಡೆಸಿ,ಕಠಿಣ ಕ್ರಮ ಕೈಗೊಳ್ಳುವ ಕುರಿತು.ಮುಖಂಡರು, ಕಲಬುರಗಿ ಜಿಲ್ಲೆಯ ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಪೊಲೀಸರು ತೋರಿದ ಅಮಾನವೀಯ ವರ್ತನೆಗೆ ಸಂಬಂಧಿಸಿದಂತೆ .ಶ್ರೀಮತಿ ಜ್ಯೋತಿ ಗಂಡ ಪರಶುರಾಮ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರು,ದಿನಾಂಕ 02-03-2025 ರಂದು ಕಲಬುರಗಿ ಜಿಲ್ಲೆಯ ಕುಸನೂರ ರಸ್ತೆಯಲ್ಲಿರುವ ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು.
ಆದರೆ 05-03-2025 ರಂದು ರಕ್ತದ ಒತ್ತಡ ಹೆಚ್ಚಾದ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯೆ ಡಾ. ಚಂದ್ರಿಕಾ ಸ್ಥಳದಲ್ಲಿರಲಿಲ್ಲ. ತುರ್ತು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡದೆ ವೈದ್ಯಕೀಯ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಶ್ರೀಮತಿ ಜ್ಯೋತಿ ಅವರು ಅಕಾಲಿಕವಾಗಿ ಮೃತರಾಗಿದ್ದಾರೆ ಎಂದು ವೈದ್ಯರು ಹೇಳುತ್ತಾರೆ ಆದರೆ ಸರಿಯಾದ ಸಮಯಕ್ಕೆ ವೈದ್ಯರು ನೋಡಿದರೆ ಜ್ಯೋತಿ ಎಂಬ ಹೆಣ್ಣು ಮಗಳು ಸಾಯುತ್ತಿಲ್ಲ ಎಂದು ಸಮಾಜದ ಮುಖಂಡರು ವಾದವಾಗಿ ಅದರ ಪ್ರಯುಕ್ತ ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ.ರೇವಣಸಿದ್ದ ಕಟ್ಟಿಮನಿ. ಸುನಿಲ್ ಸಲಗರ.ವಿಜಯರಾಜ್ ಕೋರಡಂಪಳ್ಳಿ.ಅನಿಲ ಡೋಂಗುರ್ಗಾವ .ರವಿ ಸಿಂಗೆ.ಕೃಷ್ಣ ಕಟ್ಟಿಮನಿ.ಅನಿಲ್ ಅಶೋಕ್. ನಗರ್.ರಾಘವೇಂದ್ರ ಬನ್ನೂರ್.ನಾಗರಾಜ್ ಶಾಹಬಾದ.ಸಚಿನ್ ತಾರಫೈಲ್.ನೂಲಿ ಚೆನ್ನಯ್ಯ ಸಂಜುಕುಮಾರ ಸಿರಗಾಪುರ್.ಅರುಣ್ ಕುಮಾರ್ ಬೆಳಕೂಟ.ಮುಂತಾದವರು ಉಪಸ್ಥಿತಿ ಇದ್ದರು.
ವರದಿ :ಸುನಿಲ್ ಸಲಗರ