ಹುಕ್ಕೇರಿ:- ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಇವರಿಂದ 13 10 2023 ರಂದು ಸ್ವಾತಂತ್ರದ ಬೆಳ್ಳಿಚುಕ್ಕಿ ನಾಡದ ಕಿತ್ತೂರು ಉತ್ಸವಕ್ಕೆ ಜ್ಯೋತಿ ಯಾತ್ರೆ ಮುಖಾಂತರ ಅಕ್ಟೋಬರ್ 23 24 ಹಾಗೂ 25 2023 ರಂದು ನಡೆಯಲಿರುವ ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮಕೆ ಚಾಲನೆ ನೀಡಿದರು.
ಹುಕ್ಕೇರಿಯ ಅಡವಿಸಿದ್ದೇಶ್ವರ ಮಠಕ್ಕೆ ಬಂದು ತಲುಪಿದ ಜ್ಯೋತಿಯಾತ್ರೆಗೆ ಹುಕ್ಕೇರಿಯ ತಹಶೀಲ್ದಾರರಾದ ಮಂಜುಳಾ ನಾಯಕ್ ಹಾಗೂ ಹುಕ್ಕೇರಿಯ ಸಿಪಿಐ ಮಹಾಂತೇಶ್ ಬಸಾಪುರ ಚಾಲನೆ ನೀಡಿದರು.
ಅಡವಿ ಸಿದ್ದೇಶ್ವರ ಮಠದಿಂದ ಪೇಟೆ ಮಾರ್ಗವಾಗಿ ಹುಕ್ಕೇರಿಯ ಕೋರ್ಟ್ ಸರ್ಕಲ್ ವರೆಗೆ ಜ್ಯೋತಿಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಪುರಸಭೆ ಹುಕ್ಕೇರಿ ಅಧಿಕಾರಿಗಳು, ಕುರುಬರ ಸಮಾಜದವರು, ವಿವಿಧ ಶಾಲಾ ವಿದ್ಯಾರ್ಥಿಗಳು, ಡಿ. ಎಸ್. ಪಾಟೀಲ್, ಎಎಸ್ಐ. ಸಾಹೇಬರು. ಕೃಷ್ಣಪ್ಪ. ಉದುಪುಡಿ, ಹುಕ್ಕೇರಿಯ ಸಿಡಿಪಿಓ, ಹೋಳಪ್ಪ. ಎಂ ಹೆಚ್, ಹಾಗೂ ಆಶಾ ಕಾರ್ಯಕರ್ತರು, ಮತ್ತು ಹುಕ್ಕೇರಿಯ ಜನತೆ ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ