ಧಾರವಾಡ :-ಜಿಲ್ಲೆ ಕಲಘಟಗಿ ತಾಲೂಕಿನ ಬಿ ಗುಡಿಹಾಳ ಕ್ರಾಸ್ ಬಳಿ ಇರುವ ಅದೇ ಗ್ರಾಮದ ಬಸಯ್ಯ ಹಿರೇಮಠ ಎಂಬವರಿಗೆ ಸೇರಿದ ಎಲೆಕ್ಟ್ರಿಕ ಬೈಕನ್ನು ಚಾರ್ಜ್ ಇಡಲಾಗಿದ್ದ ಬ್ಯಾಟರಿ ಸ್ಫೋಟವಾಗಿ ಮನೆಗೆ ಬೆಂಕಿ ಹತ್ತಿಕೊಂಡು ಭಾರಿ ಅನಾಹುತ ನಡೆದುಹೋಗಿದೆ.
ಅದೃಷ್ಟ ವಶಾತ್ ಬೆಂಕಿ ಕಾಣಿಸಿಕೊಳ್ಳುತ್ತಲೇ ಮನೆಯವರು ಹೊರಗೆ ಓಡಿ ಬಂದು ಸುರಕ್ಷತವಾಗಿದ್ದಾರೆ,ಅನಾಹುತಕ್ಕೆ ಅಪಾರ ಪ್ರಮಾಣದ ಆಸ್ತಿ ಹಾಳಾಗಿದೆ.
ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಭಾರಿ ಅನಾಹುತವನ್ನು ತಪ್ಪಿಸಿ ಬೆಂಕಿಯನ್ನು ನಂದಿಸಿದ್ದಾರೆ.
ವರದಿ: ವಿನಾಯಕ ಏನ್ ಗುಡ್ಡದಕೇರಿ