Join The Telegram | Join The WhatsApp |
ಚಿಂಚೋಳಿ:- ಕಲ್ಬುರ್ಗಿ ಪಟ್ಟಣದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ ದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಣೆ ಮಾಡಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ ಕುಲಪತಿಗಳು ಡಾ. ದಯಾನಂದ್ ಅಗಸರ್ ಅತಿಥಿಗಳಾದ ಡಾ.ಶರಣಪ್ಪ.ಕೆ.ಎಸ್. ಕುಲಸಚಿವರು ಆಡಳಿತ ಪ್ರೋ. ಜ್ಯೋತಿ ಧಮ್ಮಪ್ರಕಾಶ್ ಕುಲಸಚಿವರು ಮೌಲ್ಯಮಾಪನ.ಪ್ರೋ.ಲಕ್ಷ್ಮಣ ರಾಜನಳ್ಕರ್. ವಿಶೇಷ ಉಪನ್ಯಾಸಕರಾಗಿ ಪ್ರೋ. ಚಂದ್ರಕಾಂತ್ ಯಾತ್ನೂರ್ ಡಾ. ಅಂಬೇಡ್ಕರ್ ಅಧ್ಯಯನ ಪೀಠ ನಿರ್ದೇಶಕರು.
ಕಲ್ಯಾಣ ಕರ್ನಾಟಕದಲ್ಲಿ ಅಮೃತ ಮಹೋತ್ಸವ ಸಂಭ್ರಮ ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 13 ತಿಂಗಳ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಕಲ್ಯಾಣ ನಾಡು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಕಲಬುರಗಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಲಿದ್ದು, ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಚಂದ್ರಕಾಂತ್ ಯಾತ್ನೂರ ಅವರುಮಾತನಾಡಿ ಕಲ್ಯಾಣ ಕರ್ನಾಟಕದ ಎಳು ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ ಮನೆ ಮಾಡಿದೆ.
ದೇಶಕ್ಕೆ ಆಗಸ್ಟ್ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಹೈದರಾಬಾದ್ ನಿಜಾಮನ ಆಳ್ವಕೆಯಲ್ಲಿತ್ತು. ಭಾರತ ಸ್ವಾತಂತ್ರ್ಯಗೊಂಡು ಒಂದು ವರ್ಷ ಆದ ನಂತರ ನಿಜಾಮನಿಂದ ಈ ಪ್ರದೇಶ ದೇಶದ ಭಾಗವಾಗಿ ಸೇರ್ಪಡೆ ಆಗಿತ್ತು. ಅಂದರೆ 1948 ಸೆಪ್ಟೆಂಬರ್ 17 ರಂದು ಇದು ಭಾರತದ ಭಾಗವಾಗಿ ಸ್ವಾತಂತ್ರ್ಯ ಲಭಿಸಿತ್ತು.ಸ್ವಾತಂತ್ರ್ಯ ಲಭಿಸಿ 75 ಪೂರ್ಣಗೊಂಡಿರೋ ಹಿನ್ನೆಲೆ ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಣೆ ಮಾಡಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷರಾದ ಡಾ. ದಯಾನಂದ್ ಅಗಸರ ಮಾತನಾಡಿ ಕಲ್ಯಾಣ ನಾಡಿನ ಸ್ವಾತಂತ್ರ್ಯಕ್ಕಾಗಿ ದಿಟ್ಟ ಕ್ರಮಕೈಗೊಂಡು ಮಿಲಿಟರಿ ಆಪರೇಷನ್ ನಡೆಸಿ ಹೈದರಾಬಾದ್ ನಿಜಾಮನ ಕಪಿಮುಷ್ಠಿಯಿಂದ ಮುಕ್ತಿಗೊಳಿಸಿ ಸ್ವಾತಂತ್ರ್ಯ ಕೊಡಿಸಿರುವ ಈ ಸಂದರ್ಭದಲ್ಲಿ ಜಗನ್ನಾಥ್ ಪಟ್ಟಣಕರ್ .ಮಹೇಶ್ ಸುಂಕನೂರ್ .ಜ್ಞಾನ ಮಿತ್ರ ಸುನಿಲ್ ಸಲಗರ .ಹಾಗು ವಿವಿಧ ಶಾಲೆಯ ಮಕ್ಕಳು ಶಿಕ್ಷಕರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು
ವರದಿ:- ಸುನಿಲ್ ಸಲಗರ
Join The Telegram | Join The WhatsApp |