Join The Telegram | Join The WhatsApp |
ಬೆಳಗಾವಿ: ಶನಿವಾರ ದಿನಾಂಕ 5ನೆಯ ನವೆಂಬರ ದಿನದಂದು ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರಿಗೆ ಜೊತೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಅವರು ಈ ಮೇಲಿನಂತೆ ಹೇಳಿದ್ದಾರೆ..
ಸಂಕೇಶ್ವರದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಂಘಟನೆಗಳ ಜೊತೆ ಸಮಾಲೋಚನೆ ಮಾಡಲು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮೇಲ್ಕಂಡ ವಿಷಯದ ಕುರಿತಾಗಿ ಮಾತಿಗೆ ಇಳಿದರು..
ಗಡಿನಾಡಿನ ಕನ್ನಡಿಗರಿಗೆ 67ನೆಯ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಅವರು, ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ತಾವು ಪ್ರತಿವರ್ಷ ಗೈರಾಗುವ ಪ್ರಶ್ನೆಗೆ ಸ್ವ ಸಮರ್ಥನೆ ಮಾಡಿಕೊಂಡು ಉತ್ತರ ನೀಡಿದರು.. ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯ ವಿಷಯ ಬಂದಾಗ, ಇಲ್ಲಿನ ರಾಜಕಾರಣಿಗಳು ಅಕ್ಷರಶಃ ರಣಹೇಡಿಗಳಾಗುತ್ತಾರೆ ಎಂದರು….
ಇನ್ನು ರಾಜ್ಯೋತ್ಸವ ಆಚರಣೆ ವೇಳೆ ಸಮಯದ ನಿರ್ಭಂಧ ಹೇರುವುದು ಏಷ್ಟು ಸರಿ ಎಂಬ ಮಾತಿಗೆ ಉತ್ತರಿಸಿದ ಅವರು, ಇಲ್ಲಿನ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಈ ವರ್ತನೆ ಸರಿಯಲ್ಲ,, ಅದರ ಕುರಿತಾಗಿ ಇಲ್ಲಿರುವ ನಮ್ಮ ಸಂಘಟನೆಯವರು ನನ್ನ ಗಮನಕ್ಕೆ ತಂದಿದ್ದಾರೆ, ಈ ನಿಟ್ಟಿನಲ್ಲಿ ಸರ್ಕಾರಗಳು ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು, ಅದೇರೀತಿ ನಮ್ಮ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಕೂಡಾ ಸಂಬಂಧಪಟ್ಟ ಜಿಲ್ಲಾ ಕಛೇರಿಗಳ ಎದುರು ಪ್ರತಿಭಟನೆ ಮಾಡಿ ಕೇಳಬೇಕು ಎಂಬ ಸೂಚನೆ ನೀಡಿದರು..
ಬೆಳಗಾವಿಯಲ್ಲಿ ಕನ್ನಡಿಗರ ಸಂಭ್ರಮಕ್ಕೆ, ಸಡಗರಕ್ಕೆ ಯಾವುದೇ ಇಲಾಖೆಗಳು ಅಡ್ಡಿ ಮಾಡಮಾರದು, ಕನ್ನಡ ಸಂಘಟನೆಗಳು ಕೂಡಾ ಇಂತಾ ವಿಷಯದಲ್ಲಿ ಸುಮ್ಮನೆ ಕೂರಬಾರದು ಎಂದು ಕಿವಿಮಾತು ಹೇಳಿದರು..
ವರದಿ ಪ್ರಕಾಶ ಕುರಗುಂದ.
Join The Telegram | Join The WhatsApp |