ಚಿಂಚೋಳಿ;- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದಲಿತ ನಾಯಕರು ಹಾಗೂ ಮಾದಿಗ ಸಮಾಜದ ಹಿರಿಯ ಮುಖಂಡರು ಮಾದಿಗ ಸಮಾಜದ ಏಳಿಗೆಗಾಗಿ ಹಗಲಿರುಳು ದುಡಿಯುವ ಹಾಗೂ ಎಲ್ಲಾ ಜಾತಿ ವರ್ಗದ ಸಮಾಜದ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತಹ ಏಕೈಕ ನಾಯಕರು ಮಾದಿಗ ಸಮಾಜದ ಹುಟ್ಟು ಹೋರಾಟಗಾರರು ಹಾಗೂ ಎಜೆ ಸದಾಶಿವ ಆಯೋಗದ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಈ ಗೋಪಾಲರಾವ್ ಕಟ್ಟಿಮನಿ ಅವರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು
ಕಲ್ಬುರ್ಗಿ ಇವರನ್ನು ಗುರುತಿಸಿ ಕರ್ನಾಟಕ ಸಂಭ್ರಮ 50ರ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಯನ್ನು ನೀಡಿ ಕರ್ನಾಟಕ ರಾಜ್ಯ ಸರ್ಕಾರದ ಸಣ್ಣ ಕೈಗಾರಿಕೆ ಇಲಾಖೆಯ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ್ ಪ್ರಶಸ್ತಿ ನೀಡಿ ಗೌರವಿಸಿದ ಸಲುವಾಗಿ. ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಂಚೋಳಿ ರವರು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಜಗನ್ನಾಥ್ ಎಸ್ ಕಟ್ಟಿಮನಿ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ಅದರ ಪ್ರಯುಕ್ತ ಮಾದಿಗ ಸಮಾಜದವರು,ಇಂದು ಚಿಂಚೋಳಿ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು ಮಾದಿಗ ಸಮಾಜದ ಮುಖಂಡರಿಗೆ ಚಿಂಚೋಳಿ ತಾಲೂಕಿನ ಎಲ್ಲಾ ಮಾದಿಗ ಸಮಾಜದ ಮುಖಂಡರು ಶ್ರೀ ಗೋಪಾಲರು ಕಟ್ಟಿಮನಿ ಹಾಗೂ ಶ್ರೀ ಜಗನ್ನಾಥ್ ಕಟ್ಟಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಮಾದಿಗ ಸಮಾಜದ ಎಲ್ಲಾ ಯುವ ಮುಖಂಡರು ಹಾಗೂ ಸಮಾಜದ ಹೋರಾಟಗಾರರು ಸಂತೋಷ ಹರ್ಷಿ ವ್ಯಕ್ತಪಡಿಸಿದ್ದಾರೆ ಪ್ರಶಸ್ತಿ ನೀಡಿದಂತಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರಿಗೂ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಂಚೋಳಿ ಅವರಿಗೂ ನಮ್ಮ ಸಮಾಜ ನಿಮಗೆ ಚಿರಋಣಿಯಾಗಿರುತ್ತಾರೆ
ಈ ಸಂದರ್ಭದಲ್ಲಿ ಈ ಹಿರಿಯ ಪತ್ರಕರ್ತರಾದ ಶಾಮರಾವ್ ಓಂಕಾರ್ ಸುರೇಶ್ ವಾಲಿಕರ್ ಉಪೇಂದ್ರ ಸರ್ ಸುಂದರ್ ಡಿ ಸಾಗರ್ ಹನುಮಂತ್, ಚಂದನಕೇರ ಜಗನಾಥ್ ಚುಮ್ಮನಚೋಡ ಸುನಿಲ್ ಸಲ್ಗರ ವಿಜಯರಾಜ್ ಸಿದ್ದರಾಮ್ ನಿಡುಗುಂದ ಅಶ್ವತ್ ಕಟ್ಟಿಮನಿ ಪ್ರಶಾಂತ್ ಕಟ್ಟಿಮನಿ ಅಭಿ ಕಟ್ಟಿಮನಿ ಅರುಣ್ ಕಟ್ಟಿಮನಿ ಅಮರ ಲೋಡ್ನೂರ್ ಶ್ರೀಮಂತ ಕುಪನೂರ್ ರೇವಣಸಿದ್ದ ರುಸ್ತಂಪೂರ ಮಾತೇಷ ಎಲ್ಲಪ್ಪಳ್ಳಿ ಅನಿಲ ರುಸ್ತಂಪೂರ ಮುಂತಾದವರು ಉಪಸ್ಥಿತಿ ಇದ್ದರು
ವರದಿ:- ಸುನಿಲ್ ಸಲಗರ