ಹುಕ್ಕೇರಿ:- ಪ್ರವಾಸಿ ಮಂದಿರ ದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ನೂತನವಾಗಿ ಆಯ್ಕೆಯಾದ ಎಸ್. ಸಿ . ಎಸ್ .ಟಿ . ದೌರ್ಜನ್ಯ ತಡೆ ಸಮಿತಿಯ ಸದಸ್ಯರಾದ ಶ್ರೀ ಕರೇಪ್ಪಾ ಗುಡೆನ್ನವರ ಇವರಿಗೆ ಸಂಘದ ಎಲ್ಲಾ ಪದಾಧಿಕಾರಿಗಳಿಂದ ಸನ್ಮಾನ ಸತ್ಕಾರ ಮಾಡಲಾಯಿತು*
ನಂತರ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಎಸ್ .ಸಿ . ಸಮಾಜದ ಶ್ರೀಮತಿ ಅರ್ಚನಾ ಜೈದೀಪ ದಾಬಾಡೆ ಇವರ ಮೇಲೆ ದಿನಾಂಕ 31/3/2023 ಪರಿಶಿಷ್ಟ ಜಾತಿಯವರು ಅಂತಾ ಗೋತ್ತಿದ್ದರೂ ಸಹ ಅವರಿಗೆ ಜಾತಿ ನಿಂದನೆ ಮಾಡಿ ಆರೋಪಿತರು ಫಿರ್ಯಾದಿಗೆ ಹಾಗೂ ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಯಿತು
ಹಾಗೂ ಹೊಡಿಬಡಿ ಮಾಡಿ ಫಿರ್ಯಾದಿಯ ಗಂಡ ಜೈದೀಪ ಅಂಕುಶ ದಾಬಾಡೆ ಇವನಿಗೆ ಕಬ್ಬಿಣದ ರಾಡದಿಂದ ತಲೆಗೆ ಹೊಡೆದು ಗಾಯ ಪಡಿಸಿ ಹಾಗೂ ಫಿರ್ಯಾದಿಯ ಮೈದುನ ಸಂದೀಪ ಅಂಕುಶ ದಾಬಾಡೆ ಇವನಿಗೆ ಹೊಟ್ಟೆಗೆ ಎದೆಗೆ ಒದ್ದು ಒಳಪೆಟ್ಟು ಪಡಿಸಿ ಅವಾಚ್ಯ ಬೈದು ಜೀವದ ಧಮಕಿ ಹಾಕಿದ ಅಪರಾಧ ಎಂದು ಪಂಕಜ ವೀರಕುಮಾರ ಪಾಟೀಲ ಇವರ ಮೇಲೆ ದಾಖಲ್ಲ ಆಗಿದ್ದರೂ ಕೂಡ ಇವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಇದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಅಪರಾಧ ಸಂಖ್ಯೆ 52/2023ರ ಎಲ್ಲಾ ದಾಖಲೆಗಳನ್ನು ಕರೇಪ್ಪಾ ಗುಡೆನ್ನವರ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾದಿಕಾರಿಗಳು ಉಪಸ್ಥಿತರಿದರು .
ವರದಿ:- ಶಿವಾಜಿ ಎನ್ ಬಾಲೇಶಗೋಳ