This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ರಾಜ್ಯ, ದೇಶವನ್ನು ನಿಷ್ಠೆ, ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ : ಕಾರ್ಣಿಕ ನುಡಿದ್ರು ಗೊರವಯ್ಯ

Join The Telegram Join The WhatsApp

ಹೊಸಪೇಟೆ: ಇಲ್ಲಿನ ಮೈಲಾರ ಲಿಂಗದಲ್ಲಿ ನಡೆಯುವಂತ ಕಾರ್ಣೀಕ ನುಡಿ ಜಗತ್ ಪ್ರಸಿದ್ಧಿಯಾದಂತದ್ದು. ಇಂದು ನಡೆದಂತ ಕಾರ್ಣೀಕದಲ್ಲಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ಗೊರವಯ್ಯ ಕಾರ್ಣಿಕ ನುಡಿ ನುಡಿದ್ದಿದ್ದು, ಈ ರಾಜ್ಯ, ದೇಶವನ್ನು ನಿಷ್ಠೆ, ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವಂತ ಮೈಲಾರ ಕ್ಷೇತ್ರದಲ್ಲಿ ಇಂದು ವರ್ಷದ ಕಾರ್ಣಿಕೋತ್ಸವ ನಡೆಯಿತು. ಈ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಕಾರ್ಣೀಕ ಕಂಬವನ್ನೇರಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ನುಡಿದ್ದಾರೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನುಡಿದಂತ ಈ ಕಾರ್ಣಿಕ ನುಡಿಯನ್ನು ಮೈಲಾರ ಲಿಂಗೇಶ್ವರ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದು, ಈ ರಾಜ್ಯ, ರಾಷ್ಟ್ರವನ್ನು ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ಆಳುತ್ತಾನೆ ಎಂದರು.

ಮಳೆ, ಬೆಳೆ ಹೆಚ್ಚಾಗಿ, ಸಮೃದ್ಧಿಯಾಗಲಿದೆ. ಈ ಬಾರಿ ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆಯೂ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂಬುದಾಗಿಯೂ ವಿಶ್ಲೇಷಿಸಿದ್ದಾರೆ.


Join The Telegram Join The WhatsApp
Bharath Vaibhav
the authorBharath Vaibhav

Leave a Reply