Join The Telegram | Join The WhatsApp |
*ಬೆಳಗಾವಿ* ಶುಕ್ರವಾರ ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತೆರೆದ ವಾಹನದಲ್ಲಿ ಸಂಚಾರ ಮಾಡಿದರು..
ಇತ್ತೀಚಿಗೆ ಬಿಡುಗಡೆಯಾದ *ವೇದ* ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದ್ದು, ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯಾವಾದ ತಿಳಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಚಿತ್ರತಂಡ, ಇಂದು ಬೆಳಗಾವಿಗೆ ಆಗಮಿಸಿ ಚಿತ್ರಾ ಚಿತ್ರಮಂದಿರದಲ್ಲಿ ಸಾರ್ವಜನಿಕರೊಂದಿಗೆ ಚಿತ್ರ ವೀಕ್ಷಣೆ ಮಾಡುತ್ತಿದೆ..
ಅಭಿಮಾನಿಗಳಿಗೆ ಖುಷಿ ನೀಡುವ ಈ ದಿನದಂದು ಅಭಿಮಾನಿಗಳೆಲ್ಲರು ಸಂಭ್ರಮದಿಂದ ಶಿವಣ್ಣನೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಹೂವಿನ ಹಾರ ಅರ್ಪಿಸಿ, ಬೆಳ್ಳಿ ರಥದಲ್ಲಿ, ಹಾಗೂ ತೆರೆದ ವಾಹನದಲ್ಲಿ, ಹಾಡು, ಡೊಳ್ಳುಕುಣಿತದೊಂದಿಗೆ ಚೆನ್ನಮ್ಮ ವೃತ್ತದಿಂದ ಚಿತ್ರಾ ಚಿತ್ರ ಮಂದಿರದವರೆಗೆ ಭವ್ಯ ಮೆರವಣಿಗೆ ಮೂಲಕ ಸಾಗಿದರು…
ಅಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವರು ಎಂಬ ಮಾಹಿತಿಯಿದೆ…
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ, ಉಳಿದ ಚಿತ್ರ ಕಲಾವಿದರು, ನಿರ್ದೇಶಕ ಹರ್ಷಾ, ನಿರ್ಮಾಪಕಿಯಾದ ಗೀತಾ ಶಿವರಾಜ್ಕುಮಾರ, ಇನ್ನಿತರರು ಆಗಮಿಸಿದ್ದರು..
ಈ ವೇಳೆ ಜಿಲ್ಲಾ ಶಿವರಾಜಕುಮಾರ್ ಅಭಿಮಾನಿ ಸಂಘದ ಪದಾಧಿಕಾರಿಗಳಾದ, ಸಿಂದೊಳ್ಳಿಯ ಈರಾ, ರಾಜವಂಶದ ಅಭಿಮಾನಿ ಬೆಳಗಾವಿ ನಿತಿನ, ಜಿಲ್ಲಾಧ್ಯಕ್ಷ ಶೇಖರ್ ಕಾಲೇರಿ,, ಇನ್ನೂ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |