ಬೆಂಗಳೂರು : ಅಪ್ಪಾಜಿ ಇದ್ದಾಗ ಒಂದು ಶಕ್ತಿ ಇತ್ತು ಈಗ ಶಕ್ತಿ ಅವಶ್ಯಕತೆ ಇದೆ. ನಾಡು ನೆಲ, ಜಲ ವಿಚಾರವಾಗಿ ನಾವು ಸುಮ್ಮನೆ ಕೂರುವುದಿಲ್ಲ. ಫಿಲಂ ಚೇಂಬರ್ ಚುನಾವಣೆ ಬಳಿಕ ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದು ನಟ ರಾಘವೇಂದ್ರ ರಾಜಕುಮಾರ ತಿಳಿಸಿದರು.
ಬೆಂಗಳೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು ಕಾವೇರಿ ಸಮಸ್ಯೆ ಬಗೆಹರಿಯುತ್ತೆ ಅಂದರೆ ಜೀವ ಕೂಡ ಕೊಡುತ್ತೇವೆ ಕಾವೇರಿ ನಮ್ಮ ಜೀವ ಜಲ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಕಾವೇರಿ ನಮ್ಮ ಜೀವ ಜಲ ಅಪ್ಪಾಜಿ ಅವರಿದ್ದಾಗ ಇಂತಹ ಸಮಸ್ಯೆಗಳು ಆಗುತ್ತಿರಲಿಲ್ಲ.ಹಾಗಂತ ನಾವು ಸುಮ್ಮನಿರೋಕೆ ಆಗುವುದಿಲ್ಲ ಎಂದು ಹೇಳಿದರು.
ನಮ್ಮ ಜನಕ್ಕೆ ಏನೇ ತೊಂದರೆ ಆದರೂ ನಮ್ಮ ಕುಟುಂಬ ಯಾವುದೇ ಹೋರಾಟ ಇದ್ದರು ಎಲ್ಲದಕ್ಕೂ ಬೆಂಬಲ ಇರುತ್ತದೆ. ಅವರೇನು ನಿರ್ಧಾರ ತೆಗೆದುಕೊಂಡರು ನಮ್ಮ ಕುಟುಂಬ ಹಾಗು ಫಿಲಂ ಇಂಡಸ್ಟ್ರಿ ಕೂಡ ಬೆಂಬಲ ನೀಡುತ್ತದೆ ಎಂದು ತಿಳಿಸಿದರು