Ad imageAd image

ನಿಪ್ಪಾಣಿ ಶಹರದ ಹೊರವಲಯದ ಯಮಗರ್ಣಿ ಗ್ರಾಮ ಬಳಿ ಓರ್ವನ ಬರ್ಬರ ಹತ್ಯೆ.j

Bharath Vaibhav
ನಿಪ್ಪಾಣಿ ಶಹರದ  ಹೊರವಲಯದ ಯಮಗರ್ಣಿ ಗ್ರಾಮ ಬಳಿ ಓರ್ವನ ಬರ್ಬರ ಹತ್ಯೆ.j
WhatsApp Group Join Now
Telegram Group Join Now

ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಅನ್ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಸಹಾರಾ ಹೆದ್ದಾರಿ ಬಳಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ಸಂತೋಷ್ ವಿಶ್ವನಾಥ ಚವ್ಹಾಣ (ವಯಸ್ಸು 40, ಯಮಗರ್ನಿ ನಿವಾಸಿ) ಎಂದು ಗುರುತಿಸಲಾಗಿದೆ.

ಇದೇ ವೇಳೆ ಆರೋಪಿ ಸೌರಭ ವಸಂತ ಕೊರ್ವಿ (ವಯಸ್ಸು 26, ಯಮಗರ್ನಿ ನಿವಾಸಿ) ಎಂಬಾತನನ್ನು ಬಸವೇಶ್ವರ ಚೌಕ್ ಪೊಲೀಸರು ಬಂಧಿಸಿದ್ದಾರೆ.

ತನಿಖೆಯನ್ನು ನಡೆಸುತ್ತಿದ್ದಾರೆ ಸ್ವಾರಸ್ಯವೆಂದರೆ, ಕಳೆದ ವಾರ ನಗರದಲ್ಲಿ ಯುವಕನೊಬ್ಬನ ಕೊಲೆಯಾದ ತಕ್ಷಣ ಒಂಬತ್ತನೇ ದಿನಕ್ಕೆ ಈ ಘಟನೆ ನಡೆದಿರುವುದರಿಂದ ಪೊಲೀಸ್ ವ್ಯವಸ್ಥೆ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗಿದೆ ಸದ್ಯ ಪ್ರದೇಶದಲ್ಲಿ ಬೀತಿ ವಾತಾವರಣ ಮನೆ ಮಾಡಿದೆ ಹಾಗೂ ನಿಪ್ಪಾಣಿ ವಿಭಾಗದಲ್ಲಿ ಕಳ್ಳತನ,ಹೊಡೆದಾಟ, ಬಡಿದಾಟ, ಅಕ್ರಮ ಸರಾಯಿ ದಂಧೆ, ಮೀಟರ ಬಡ್ಡಿ ವ್ಯವಹಾರ, ಹಾಪ್ ಮರ್ಡರ್,ಗಾಂಜಾ ಕೇಸ್ , ಮೊಬೈಲ ಚೋರಿ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ . ಅಲ್ಲದೆ ರಾಷ್ಟ್ರೀಯ ರಸ್ತೆಗಳಲ್ಲಿ ಪ್ರತಿದಿನ ಚಾಕು, ಚೂರಿ, ತಲವಾರ್ ಸೇರಿದಂತೆ ಇನ್ನಿತರ ಹರಿತವಾದ ಆಯುಧಗಳ ಮಾರಾಟ ದಂಧೆ ನಡೆಯುತ್ತಿದೆ ಆದರೂ ಸಹ ಇದನ್ನು ಗಮನಿಸದ ಸಂಬಂಧ ಪಟ್ಟ ಅಧಿಕಾರಿಗಳು.

ಈ ಬಗ್ಗೆ ಹೆಚ್ಚಿನ ಮಾಹಿತಿ ಏನೆಂದರೆ ಮೃತ ಸಂತೋಷ್ ಚವ್ಹಾಣ ಸಾಮಾಜಿಕ ಕಾರ್ಯಕರ್ತ ಎಂದು ತಿಳಿದುಬಂದಿದೆ. ಶಂಕಿತ ಆರೋಪಿ ಸೌರಭ್ ಕೊರ್ವಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಇದೇ ವೇಳೆ ಸೌರಭ್ ಹಲವರಿಗೆ ವಂಚಿಸಿದ್ದ. ಆತನ ಮೋಸಕ್ಕೆ ಬಲಿಯಾಗಬೇಡಿ ಎಂದು ಸಂತೋಷ್ ಚವಾಣ್ ಕೆಲವರಿಗೆ ಹೇಳಿದ್ದಕ್ಕೆ ಸೌರಭ್ ಕೋಪಗೊಂಡಿದ್ದ.

ಕಾರಣ ಚಾಕುವಿನಿಂದ ಇರಿದು ಸಂತೋಷ ಚವ್ಹಾಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮೃತರು ಮತ್ತು ಆರೋಪಿಗಳು ತಮ್ಮ ಸ್ನೇಹಿತರೊಂದಿಗೆ ಸಹಾರಾ ಹೋಟೆಲ್ ಬಳಿ ಯಾವುದೋ ಕೆಲಸದ ನಿಮಿತ್ತ ತೆರಳಿದ್ದರು. ಉಳಿದ ಗೆಳೆಯರು ಬೇರೆಡೆ ಚರ್ಚೆ ನಡೆಸುತ್ತಿದ್ದಾಗ ಇಬ್ಬರು ಪಕ್ಕಕ್ಕೆ ಹೋಗಿ ಚರ್ಚೆ ನಡೆಸುತ್ತಿದ್ದ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಗಾಯಗೊಂಡ ಸ್ಥಿತಿಯಲ್ಲಿ ಸಂತೋಷ್‌ನನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಸಂತೋಷ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಮಹಾತ್ಮಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಏತನ್ಮಧ್ಯೆ, ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠ ಭೀಮಾಶಂಕರ ಗುಳೇದ್ ಡಿಎಸ್ಪಿ ಗೋಪಾಲಕೃಷ್ಣ ಗೌಡರ್,
ಸಿಪಿಐ ಬಿ. ಎಸ್. ತಳವಾರ್,ಬಸವೇಶ್ವರ ಚೌಕ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮೇಶ ಪವಾರ್, ತಳವಾರ ಅವರೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕಿತ ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ತಡರಾತ್ರಿ ಆತನನ್ನು ವಿಚಾರಣೆ ನಡೆಸಲಾಗಿದ್ದು.

ಗುರುವಾರ ರಾತ್ರಿ ನಡೆದ ಹಠಾತ್ ಕೊಲೆಯಿಂದಾಗಿ ನಾಗರಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೃತ ಸಂತೋಷ್ ಸಂಬಂಧಿಕರು ಮಾಡಿದ ಅಳಲು ಹೃದಯ ವಿದ್ರಾವಕವಾಗಿತ್ತು.

ಏತನ್ಮಧ್ಯೆ, ಈ ಪ್ರಕರಣದಲ್ಲಿ ಶಂಕಿತ ಆರೋಪಿ ಸೌರಭ ಕೊರ್ವಿ ವಿರುದ್ಧ ತಡರಾತ್ರಿ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಸಿಪಿಐ ಬಿ. ಎಸ್. ತಳವಾರ್ ನೇತ್ರತ್ವದಲ್ಲಿ ಮುಂದೆ ವರಿಸಿದ್ದಾರೆ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!