ಸಿರುಗುಪ್ಪ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್.ಎಮ್.ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಮೂರು ದಿನಗಳ ಕಾಲ ಶೋಕಾಚರಣೆಗೆ ಸರ್ಕಾರ ಆದೇಶ ಜಾರಿ ಮಾಡಿದ್ದು ತಾಲೂಕಿನ ಮುಖ್ಯ ಕಛೇರಿಯಾಗಿರುವ ತಹಶೀಲ್ದಾರ್ ಕಛೇರಿಯಲ್ಲಿ ಅರ್ಧಕ್ಕೆ ಧ್ವಜಾರೋಹಣ ಮಾಡದಿರುವುದು ಡಿಸೆಂಬರ್.11, ಬುಧವಾರ ಕಂಡುಬಂದಿತು.
ಈ ಬಗ್ಗೆ ಸ್ಪಷ್ಟನೆ ನೀಡಿದ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಎಲ್ಲಾ ಕಡೆ ಕಡ್ಡಾಯವಾಗಿ ಅರ್ಧಕ್ಕೆ ಧ್ವಜಾರೋಹಣ ಮಾಡುವ ಆದೇಶವಿಲ್ಲ.
ಜಿಲ್ಲೆಯಲ್ಲಿ ಒಂದು ಕಡೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಹಾಗೂ ದಿನನಿತ್ಯ ತಾಲೂಕು ಪಂಚಾಯಿತಿ ಮತ್ತು ಗ್ರಾಮಾಡಳಿತ ಕಛೇರಿಗಳಲ್ಲಿ ಅರ್ಧಕ್ಕೆ ಧ್ವಜಾರೋಹಣ ಮಾಡುತ್ತಾರೆಂದರು.
ನಗರದಲ್ಲಿ ಮುಖ್ಯ ಕಛೇರಿಗಳಾದ ಡಿವೈಎಸ್‌ಪಿ ಕಛೇರಿ, ಕೃಷಿ ಇಲಾಖೆ, ಪೋಲೀಸ್ ಠಾಣೆ, ವಲಯ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ, ಬಸ್ ಘಟಕ, ಶಿಶು ಅಭಿವೃದ್ದಿ ಯೋಜನಾ ಇಲಾಖೆ, ಇನ್ನಿತರ ಹಲವು ಸರ್ಕಾರಿ ಕಛೇರಿಗಳಲ್ಲಿ ಅರ್ಧಕ್ಕೆ ಧ್ವಜಾರೋಹಣ ನೆರವೇರಿಸದಿರುವುದು.
ಎಸ್.ಎಮ್.ಕೃಷ್ಣ ಅವರ ಅಭಿಮಾನಿಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ. ರಾಜ್ಯ ಕಂಡ ಹಿರಿಯ ರಾಜಕಾರಣಿ , ಧೀಮಂತ ನಾಯಕ, ಅಭಿವೃದ್ದಿ ಹರಿಕಾರರಾಗಿ ಹಲವಾರು ಯೋಜನೆಗಳಿಗೆ ರೂಪುರೇಷೆ ತಂದ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಎಳಷ್ಟು ಗೌರವ ಕೊಡದ, ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ಬಗ್ಗೆ ಕೆಲವು ಇಲಾಖೆಗಳಲ್ಲಿ ಕೇಳಲು ಹೋದಾಗ ಬಾವುಟ ಅರ್ಧಕ್ಕೆ ಏರಿಸಿದರೆ ಮಾತ್ರ ಗೌರವ ಸೂಚಿಸದಂತಾಗುತ್ತಾ, ಸುಮ್ನೆ ಹೋಗ್ರಿ ಎನ್ನುತ್ತಿದ್ದಾರೆ. ತಾಲೂಕಿನಲ್ಲಿ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ.
ಪ್ರಶ್ನೆ ಮಾಡಿದವರನ್ನೇ ಗುರಿಯಾಗಿಸಿ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತದೆಂದು ತಮ್ಮ ಹೆಸರೇಳದ ಸಾರ್ವಜನಿಕರು ಆರೋಪಿಸಿದರು.
ವರದಿ : ಶ್ರೀನಿವಾಸ ನಾಯ್ಕ