Join The Telegram | Join The WhatsApp |
ಬೆಳಗಾವಿ : ರವಿವಾರ ದಿನಾಂಕ 30 ರಂದು ನಗರದ ಎಸ್ ಜಿ ಬಾಳೇಕುಂದ್ರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿತು.
ವೀರ ರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ, ಹಾಗೂ ಬೆಳಗಾವಿ ತಾಲೂಕು ಮಹಿಳಾ ಘಟಕಗಳ ಸೇವಾ ದೀಕ್ಷಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಡಾ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ, ಗದಗ, ಇವರು ವಹಿಸಿಕೊಂಡಿದ್ದು,
ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ, ನಾಗನೂರು, ಬೆಳಗಾವಿ, ಇವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ಜಾಗತಿಕ ಮಹಾಸಭಾದ ಅಧ್ಯಕ್ಷರಾದ ಹಾಗೂ ನ್ಯಾಯವಾದಿಗಳಾದ ಬಸವರಾಜ ರೊಟ್ಟಿ ವಹಿಸಿಕೊಂಡಿದ್ದು, ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅವರು ಸ್ವಾಗತ ಮಾಡಿ, ಅರ್ಥಪೂರ್ಣವಾಗಿ ಪ್ರಾಸ್ತಾವಿಕ ನುಡಿಗಳನ್ನಾಡುವ ಮೂಲಕ, ಬಸವ ತತ್ವ, ಸಿದ್ದಾಂತ, ಸಂಪ್ರದಾಯ, ಆಚರಣೆಯ ಬಗ್ಗೆ ಮಾತನಾಡಿ ಸರ್ವರಿಗೂ ಯೋಗ್ಯವಾದ ಮಾಹಿತಿ ನೀಡಿದರು..
ಇನ್ನು ಕಾರ್ಯಕ್ರಮದಲ್ಲಿ ಷಟಸ್ಥಲ ದ್ವಜಾರೋಹಣವನ್ನು ಶ್ರೀ ಗೂಳಪ್ಪ ಹೊಸಮನಿ ಮಾಜಿ ಅಧ್ಯಕ್ಷರು ಬುಡಾ ನೆರವೇರಿಸಿಕೊಟ್ಟು, ಕನ್ನಡ ಉಪನ್ಯಾಸಕರಾದ ಡಾ ಪ್ರಿಯವದಾ ಹುಲಗಬಾಳಿ ಅವರು ತಮ್ಮ ಉಪನ್ಯಾಸದ ಮೂಲಕ ಬಸವ ಆಚರಣೆ, ಹಾಗೂ ಆದರ್ಶಗಳ ಬಗ್ಗೆ ವಿವರವಾದ ಉಪನ್ಯಾಸ ನೀಡಿದರು..
ಈ ಕಾರ್ಯಕ್ರಮದಲ್ಲಿ ಫ್ರೊ ಆರ್ ಎಂ ಕರಡಿಗುದ್ದಿ ಮತ್ತು ಶ್ರೀಮತಿ ವಿದ್ಯಾವತಿ ಭಜಂತ್ರಿ, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ಈ ಇರ್ವರಿಗೂ ಗೌರವ ಸನ್ಮಾನವನ್ನು ಮಾಡಲಾಯಿತು…
ಇನ್ನು ಈ ಕಾರ್ಯಕ್ರಮದಲ್ಲಿ ಶಂಕರ ಗುಡಸ, ಶ್ರೀಮತಿ ಪ್ರೆಮಕ್ಕ ಅಂಗಡಿ, ಸಮಾಜದ ಪ್ರಮುಖ ಗಣ್ಯರು, ಪದಾಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ಮಹಿಳಾ ಪದಾಧಿಕಾರಿಗಳು, ನೂರಾರು ಶರಣ, ಶರಣೆಯರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |