This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime News

ಮೂರು ಕೋಳಿಗಳನ್ನು ಬಂಧಿಸಿದ ಕೊಪ್ಪಳ ಪೊಲೀಸರು

Join The Telegram Join The WhatsApp

ಕೊಪ್ಪಳ: ಇಲ್ಲಿನ ಕಾರಟಗಿ ಪೊಲೀಸ್ ಠಾಣೆಯಲ್ಲಿ ಮೂರು ಕೋಳಿಗಳು ಬಂಧಿಯಾಗಿವೆ. ಅರೇ ಕೋಳಿಗಳನ್ನು ಬಂಧಿಸಿದ್ದಾರಾ? ಅವೇನು ಮಾಡಿವೆ? ಇದೇನು ತಮಾಷೆ ಎಂದು ಅನ್ನಿಸಿದರೂ ಇದು ಸತ್ಯ.

ಕಾರಟಗಿ ತಾಲೂಕಿನ ಬಸಣ್ಣ ಕ್ಯಾಂಪ್​ನಲ್ಲಿ ಕೋಳಿ ಕಾಳಗದ ಜೂಜಾಟದಲ್ಲಿದ್ದ 3 ಕೋಳಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೆ ಕೋಳಿ ಪಂದ್ಯದಲ್ಲಿ ಭಾಗಿಯಾಗಿದ್ದ 6 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಧುಕಟ್ಟ ಎಂಬಾತ ಕೋಳಿ ಕಾಳಗ ನಡೆಸುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಪೊಲೀಸರನ್ನು ಕಂಡ ಜೂಜುಕೋರರು ಬೈಕ್‌ಗಳನ್ನು ಬಿಟ್ಟು ಪರಾರಿ ಆಗಿದ್ದು, 9 ಬೈಕ್‌ಗಳೊಂದಿಗೆ ಕಾಳಗದಲ್ಲಿ ಭಾಗಿಯಾಗಿದ್ದ ನಿರಪರಾಧಿ ಮೂರು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಳಿ ಪಂದ್ಯದಲ್ಲಿ ಭಾಗಿಯಾಗಿದ್ದ 6 ಜನರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.


Join The Telegram Join The WhatsApp
Bharath Vaibhav
the authorBharath Vaibhav

Leave a Reply