Join The Telegram | Join The WhatsApp |
ಯರಗಟ್ಟಿ: ಸಮೀಪದ ಕೋ.ಶಿವಾಪೂರದಲ್ಲಿ ಎಂದಿನಂತೆ ಅಧಿಕಾರಿಗಳು ಗ್ರಾಮ ಪಂಚಾಯತಿ ಕಛೇರಿಗೆ ಆಗಮಿಸಿದಾಗ ಅಭಿವೃದ್ಧಿ ಅಧಿಕಾರಿಗೆ ಹಾಗೂ ಸಿಬ್ಬಂದಿಗೆ ಅಚ್ಚರಿ ಆಗಿತ್ತು.
ಅಭಿವೃದ್ಧಿಅಧಿಕಾರಿ ಅಧ್ಯಕ್ಷರಿಗೆ ಮಾಹಿತಿ ನೀಡಲು ಫೋನ್ ಮಾಡಿದಾಗ ಅಧ್ಯಕ್ಷರೆ ಪತಿ ಶಿವಲಿಂಗಯ್ಯ ಮಠಪತಿ ಬೀಗ ಹಾಕಿದ್ದಾರೆ ಎಂದು ಹೇಳಿದರು.
ಅಧ್ಯಕ್ಷೆ ದೀಪಿಕಾ ಮಠಪತಿ ಅವರು ಕಳೆದ ವರ್ಷದಂತೆ ಈ ವರ್ಷ ಯಾವುದೇ ಕಾಮಗಾರಿ ಆಗಿಲ್ಲ ಎಂದು ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ ನಾನು ಯಾವುದೇ ಕಾರಣಕ್ಕೂ ತೆಗೆವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
ನಂತರ ಪಿಡಿಓ, ಕಾರ್ಯದರ್ಶಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಆಗ ಮೇಲಾಧಿಕಾರಿಗಳು ವಿಚಾರಿಸಿದಾಗ ಮನೆಯ ಉತಾರ ನೀಡಲು ಕೇಳಿಕೊಂಡರು ಆದರೆ ಅದರಲ್ಲಿ ೨೫೦೦೦ ಸಾವಿರ ಭೂಜಾ ಇದೆ ಕಡಿಮೆ ಮಾಡಿ ಕೊಡಬೇಕು ಎಂದು ತಿಳಿಸಿದರು.
ಆದರೆ ಭೊಜಾ ಹಣ ತುಂಬಿದ ದಾಖಲೆ ತಂದು ಕೊಡಿ ಎಂದು ತಿಳಿಸಿದರು. ನಾನು ಅಧ್ಯಕ್ಷ ನನ್ನದು ಸರ್ವಾಧಿಕಾರಿ ನನ್ನ ಮಾತಿಗೆ ಬೆಲೆ ಇಲ್ಲ ಎಂದು ಬೀಗ ಜಡಿಯಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಈರಪ್ಪ ಹವಳಪ್ಪನವರ ತಿಳಿಸಿದ್ದಾರೆ.
ಇಂದು ಕಾರ್ಯಾಲಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕುರಿತು ಯೂಟ್ಯೂಬ್ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದಕ್ಕೆ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಲಾಯಿತು ಬೀಗ ಹಾಕಿದ್ದರಿಂದ ಈ ಕಾರ್ಯಕ್ರಮ ಹಾಲಾಗಿದೆ ಎಂದು ಗ್ರಾ. ಪಂ. ಉಪಾಧ್ಯಕ್ಷೆ ನಾಗವ್ವ ಬಡಕಪ್ಪನವರ ಅಧ್ಯಕ್ಷರಿಗೆ ತರಾಟೆಗೆ ತೆಗೆದುಕೊಂಡರು.
ವರದಿ ಈರಣ್ಣಾ ಹುಲ್ಲೂರ
Join The Telegram | Join The WhatsApp |