Join The Telegram | Join The WhatsApp |
ಬೆಳಗಾವಿ: ಬುಧವಾರ ದಿನಾಂಕ 2 ನವೆಂಬರ್ ದಂದು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಡೋಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರೈತರ ಸಮಸ್ಯೆಗಳಿಗಾಗಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ನೂರಾರು ರೈತ ಬಾಂಧವರು ಭಾಗಿಯಾಗಿದ್ದು, ಕಡೊಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಬಹಳಷ್ಟು ಜಮೀನುಗಳು ಸರ್ಕಾರ ನಿರ್ಮಿಸುತ್ತಿರುವ ರಿಂಗ ರೋಡಿನ ಕಾಮಗಾರಿಗೆ ಹೋಗುತ್ತಿದ್ದು, ಅದರಿಂದ ಈ ಭಾಗದ ರೈತರು ಕಂಗಾಲಾಗಿ ಈ ಸಮಸ್ಯ ಬಗೆಹರಿಸಿ ಕೊಡುವಂತೆ ಮಾನ್ಯ ಶಾಸಕರಾದ ಸತೀಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಪರಿಶೀಲನೆ ಮಾಡಿ ನಮ್ಮ ಭಾಗದ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ರೈತರಿಗೆ ಮಾತು ನೀಡಿದರು.
ಈ ವೇಳೆ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಶಾಸಕರು ಬೆಳಗಾವಿಯಲ್ಲಿ ಕನ್ನಡಾಭಿಮಾನ ಇರುವಂತ ಜನಪ್ರತಿನಿಧಿಗಳು ಇರಬೇಕು, ಎಲ್ಲಾ ಹಬ್ಬ ಹರಿದಿನಗಳನ್ನು ಸಮಾನವಾಗಿ ಕಾಣುವುದು ಜನಪ್ರತಿನಿಧಿಗಳ ಕರ್ತವ್ಯ, ಜವಾಬ್ದಾರಿ ಸ್ಥಾನದಲ್ಲಿರುವ ನಾವು ಎಲ್ಲಾ ಭಾಷೆಯ ಜಾತಿಯ ಹಬ್ಬಗಳನ್ನು ಸಮಾನವಾಗಿ ಗೌರವಿಸಬೇಕು ಎಂದರು.
ಇನ್ನು ನವೆಂಬರ 7 ರಂದು ನಡೆಯುವ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬ ಆಚರಣೆ ಅದೊಂದು ಖಾಸಗಿ ಕಾರ್ಯಕ್ರಮ ಆಗಿದ್ದು, ಪಕ್ಷಕ್ಕೆ ಅದರ ಅನುಕೂಲ ಆದರೂ ಆಗಬಹುದು ಎಂದರು.ಇದೆ ವೇಳೆ ವಿವಿಧ ಯೋಜನೆಗಳ ಫಲಾನುಭವಿಗಳು ಪ್ರಮಾಣ ಪತ್ರದ ವಿತರಣೆ ಮಾಡಲಾಯಿತು.. ನೂರಾರು ರೈತರು, ಕಾರ್ಯಕರ್ತರು, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು ..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |