ಬೆಂಗಳೂರು: ಮುಂದಿನ ವರ್ಷ ಸರ್ಕಾರದ ವಿವಿಧ ಇಲಾಖೆಗಳ ಸುಮಾರು ಮೂರು ಸಾವಿರ ಹುದ್ದೆಗಳಿಗೆ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದೆ.
ಪ್ರಸಕ್ತ ವರ್ಷಾಂತ್ಯಕ್ಕೆ ಮುಂದಿನ ವರ್ಷದಲ್ಲಿ ನಡೆಸಬೇಕಾಗಿರುವ ನೇಮಕಾತಿ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಸಿದ್ದಪಡಿಸುತ್ತಿದೆ ಆಂತ ತಿಳಿದು ಬಂದಿದೆ.
ಈ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ವೇಳೆ ಅವರು ಅರ್ಜಿ ಆಹ್ವಾನ, ಪರೀಕ್ಷೆ, ಫಲಿತಾಂಶ, ಆಯ್ಕೆಪಟ್ಟಿ ಮುಂತಾದ ಚಟುವಟಿಕೆಗಳನ್ನು ನಿಗದಿಯಂತೆ ಕಾಲಮಿತಿಯಲ್ಲಿ ಮುಂದಾಗಲಿದೆ ಅಂತ ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಸಾರ್ವಜನಿಕರ ಮಾಹಿತಿಗೆ ಟೈಮ್ಲೈನ್ ಪ್ರಕಟಿಸುವ ಯೋಚನೆ ಇದೆ’ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು ಇದೇ ವೇಳೆ ತಿಳಿಸಿದ್ದಾರೆ.