Join The Telegram | Join The WhatsApp |
ಬೆಳಗಾವಿ : ಕೆಪಿಟಿಸಿಎಲ್ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗಿರುವ ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡಿವೈಸ್ ಗಳ ಮೂಲಕ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದ ವೈಷ್ಣವಿ ಬಾಳಪ್ಪ ಸನದಿ (21), ಉಪ್ಪಾರಟ್ಟಿ ಗ್ರಾಮದ ಸುಧಾರಾಣಿ ಹುವಪ್ಪ ಅರಂಭಾವಿ (24), ತುಕ್ಕಾನಟ್ಟಿ ಗ್ರಾಮದ ಐಶ್ವರ್ಯಾ ರಾಮಚಂದ್ರ ಬಾಗೇವಾಡಿ (22) ಹಾಗೂ ಬಗರನಾಳ ಗ್ರಾಮದ ಬಸವರಾಜ ರಾಮಪ್ಪಾ ಪಾವಡಿ (27) ಬಂಧಿತರು.
2022 ಅ.7 ರಂದು ನಡೆದ ಕೆಪಿಟಿಸಿಎಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಬಂಧಿತ ಆರೋಪಿಗಳು ಅತ್ಯಾಧುನಿಕ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದರು. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು 41 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ
Join The Telegram | Join The WhatsApp |