Join The Telegram | Join The WhatsApp |
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಮತ್ತೆ ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 33ಕ್ಕೆ ಏರಿದೆ. ಮೂಡಲಗಿಯ ಮಂಜುನಾಥ ರಾಮಪ್ಪ ಮಾಳಿ (23), ಮಹಾದೇವ ಹಣಮಂತ ದಾಸನಾಳ (26), ಮಾರುತಿ ರಾಮಣ್ಣ ಹೊಲದವರ (27), ಅರಭಾವಿಯ ಪುಂಡಲೀಕ ಫಕೀರಪ್ಪ ಬನಾಜ (26) ಬಂಧಿತರು. ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೊಚಿಪ್ ಬಳಸಿದ ಆರೋಪದ ಮೇಲೆ ಗೋಕಾಕ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Join The Telegram | Join The WhatsApp |