Join The Telegram | Join The WhatsApp |
ರಾಯಚೂರು :ತಾಲೂಕಿನ ವ್ಯಾಪ್ತಿಗೆ ಬರುವ RTPS ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಚಿಮ್ಮಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಯುವಕನ ವಿಷಯವನ್ನು ತಿಳಿದ ಗ್ರಾಮಾಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿಷಯ ತಿಳಿದು,
ಘಟನಾ ಸ್ಥಳಕ್ಕೆ ತೆರಳಿ, #ಸಣ್ಣ_ಸೂಗಪ್ಪನವರೊಡನೆ ಮಾತನಾಡಿ, ಅವರ ಮನವೊಲಿಸಿ ಕೆಳಗೆ ಕರೆತರಲಾಯಿತು ಮತ್ತು ಅವರ ಎಲ್ಲ ನ್ಯಾಯಸಮ್ಮತ ಬೇಡಿಕೆಗಳನ್ನು ಒಂದು ವಾರದೊಳಗಡೆ ಈಡೇರಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
ಒಂದು ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಸೂಗಪ್ಪನವರು, ಅವಸರದಲ್ಲಿ ಏನಾದರೂ ಅನಾಹುತಮಾಡಿಕೊಂಡು ಬಿಟ್ಟಿದ್ದರೆ, ಆ ಕುಟುಂಬದ ಗತಿಯೇನಾಗಬೇಡ?!! ದಯವಿಟ್ಟು ಯಾರೂ ಇಂತಹ ಕಾರ್ಯಗಳಿಗೆ ಮುಂದಾಗಬೇಡಿ, ಹಾಗೆಯೇ ಕಾರ್ಮಿಕ ವರ್ಗವನ್ನು ಯಾತೂ ಶೋಷಣೆ ಮಾಡಬಾರದು, ಅವರೆ ಉದ್ದೀಮೆದಾರರ/ಸರ್ಕಾರದ ಅನ್ನದಾತರೆಂಬುದು ನೆನಪಿರಲಿ. #ಸಣ್ಣಸೂಗಪ್ಪ ನವರಿಗೆ, ಅವರ ಕುಟುಂಬಕ್ಕೆ ಹಾಗೆಯೇ ಅವರಂತೆ ಎಲ್ಲ ಕಾರ್ಮಿಕ ಮಿತ್ರ ಬಳಗಕ್ಕೆ ಶುಭವಾಗಲಿ. ತಮ್ಮ ಈಡೇರಿಕೆಯ ನಾನುಸಚಿವರ ಜೊತೆ ಮಾತನಾಡಿ ತಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಆಶ್ವಾಸನೆ ಕೊಟ್ಟರು
ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸತೀಶ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರುಗಳಾದ ಶ್ರೀ ವೆಂಕಟೇಶ, ಶ್ರೀ ಸುಗೂರೇಶ್ ತಮ್ಮುಡು, ಕಾರ್ಮಿಕ ಮುಖಂಡರಾದ, ಮಲ್ಲಪ್ಪ ಧಣಿ, ಮಾಮಿಯವರು, ಭಾಜಪ ಮುಖಂಡರಾದ ಶ್ರೀ ಶಿವರಾಜ್ ವಡ್ಲೂರ್ ಅವರು ಸೇರದಂತೆ, ಕಾರ್ಮಿಕ ಮುಖಂಡರು, ಕಾರ್ಖಾನೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ
Join The Telegram | Join The WhatsApp |