ಬೆಳಗಾವಿ : ಸತೀಶ್ ಜಾರಕಿಹೊಳಿ ನಮ್ಮ ನಡುವೆ ಯಾವುದೇ ವಾರ್ ಇಲ್ಲ ನಮ್ಮದು ಬಿಜೆಪಿ ವಿರುದ್ಧದ ಹೋರಾಟ ಎಂದು ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
ನಾನು 36,000 ಕೋಟಿ ಹಣವನ್ನು ಮಹಿಳೆಯರಿಗೆ ಕೊಡಬೇಕಾಗಿದೆ ಬಹಳಷ್ಟು ಅಲೆದು ತೂಗಿ ನಾನು ಸಚಿವೆಯಾಗಿ ಹೆಜ್ಜೆ ಇಡುತ್ತಿದ್ದೇನೆ ಹಾಗೆ ಉಡುಪಿ ಕೂಡ ರಾಜ್ಯದಲ್ಲಿ ಸದಾ ಹಾಟ್ ಇರುವ ಜಿಲ್ಲೆಯಾಗಿದೆ.
ಈ ಕೋಲ್ಡ್ ವಾರ್ ಹಾಟ್ ವಾರ್ ನನಗೇನು ಗೊತ್ತಿಲ್ಲ ಸತೀಶ್ ಅಣ್ಣ ಸಿಕ್ಕಾಕ ಅಭಿವೃದ್ಧಿ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತೇನೆ ಬೆಳಗಾವಿ ಜಿಲ್ಲೆಯಲ್ಲಿ 11 ಸ್ಥಾನ ಗೆಲ್ಲಲು ನಮ್ಮೆಲ್ಲರ ಒಗ್ಗಟ್ಟೇ ಕಾರಣ ಸತೀಶ್ ಅಣ್ಣ ಕೂಡ ಕೋಲ್ಡ್ ವಾರ್ ಬಗ್ಗೆ ಹೇಳಿಲ್ಲ ನಾನು ಕೇಳಿಲ್ಲ ನನ್ನ ಹಾಗೂ ಸತೀಶ್ ಅಣ್ಣ ಮಧ್ಯ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಇಲ್ಲ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ರಿಪಬ್ಲಿಕ್ ಆಫ್ ಭಾರತ ಎಂಬ ಮರುನಾಮಕರಣ ಸಾಧ್ಯತೆ ಕುರಿತಾಗಿ ನಮ್ಮ ನಾಯಕರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ನೋಡಬೇಕು ರಾಷ್ಟ್ರೀಯ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನೋಡೋಣ ಎಂದು ತಿಳಿಸಿದರು.