ಬಳ್ಳಾರಿ:-ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳ ಸಂಭ್ರಮಾಚರಣೆಯ ರಥ ಯಾತ್ರೆಯು ಇಂದು ಬೆಳಗ್ಗೆ 10 ಗಂಟೆಗೆ ಬಳ್ಳಾರಿ ನಗರದ ಆದಿದೇವತೆಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಅದ್ದೂರಿ ಯಾಗಿ ಪ್ರಾರಂಭವಾಯಿತು.
ಈ ಸಂಭ್ರಮದಲ್ಲಿ ವಿಶೇಷವಾಗಿ ೫೦೦ ಮೀಟರ್ ಉದ್ದದ ಕನ್ನಡದ ಬಾವುಟವನ್ನು ಪ್ರದರ್ಶಿಸಲಾಯಿತು ಜೊತೆಗೆ ವಿವಿಧ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ರಥಯಾತ್ರೆ ನಡೆಸಲಾಯಿತು.
ಈ ರಥದ ಚಾಲನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು,ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಾನ್ಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಅಪಾರ ಜಿಲ್ಲಾಧಿಕಾರಿಗಳು ಮಾನ್ಯ ತಹಸಿಲ್ದಾರರು, ಮಹಾನಗರ ಪಾಲಿಕೆ ಆಯುಕ್ತರು , ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಕರ್ನಾಟಕ ಜನಸೈನ್ಯ ಸಂಸ್ಥಾಪಕರಾದ ಕೆ ಏರಿಸ್ವಾಮಿ ಮತ್ತು ವಿವಿಧ ಕನ್ನಡ ಕನ್ನಡಪರ ಸಂಘಟನೆಗಳು ಶಾಲಾ ಮಕ್ಕಳು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ವರದಿ ವಿನಾಯಕ್ ಗುಡ್ಡದಕೇರಿ