ಬೆಂಗಳೂರು:-ಜಯನಗರದಲ್ಲಿರುವ ಆರ್ವಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನ ನಿರ್ದೇಶಕ ಡಾ. ರಿಷಿಕೇಶ ಟಿ ಕೃಷ್ಣನ್ ಅವರು ಕೇಂದ್ರವನ್ನು ಉದ್ಘಾಟಿಸಿದರು.
ಬೆಂಗಳೂರಿನ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಆರ್ .ವಿ.ಶಿಕ್ಷಣ ಸಂಸ್ಥೆ ಇಂದು ನಾಯಕತ್ವ ಮತ್ತು ಕಾರ್ಯನಿರ್ವಾಹಕ ಶಿಕ್ಷಣಕ್ಕಾಗಿ ಮಿನೆರ್ವ- ಆರ್.ವಿ. ಕೇಂದ್ರಕ್ಕೆ ಚಾಲನೆ ನೀಡಿದೆ. ಈ ಕೇಂದ್ರ ನಾಯಕತ್ವ ಮತ್ತು ಎಕ್ಸಿಕ್ಯೂಟಿವ್ ಎಜುಕೇಶನ್ಗೆ ಮೀಸಲಾಗಿದೆ. ನವೀನ ಮತ್ತು ಪರಿವರ್ತಕ ಕಲಿಕೆಯ ಅನುಭವಗಳ ಮೂಲಕ ತಮ್ಮ ವೃತ್ತಿಜೀವನವನ್ನು ಉನ್ನತೀಕರಿಸಲು ಬಯಸುವ ವೃತ್ತಿಪರರನ್ನು ಸಶಕ್ತಗೊಳಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.ಡಾ. ಋಷಿಕೇಶ ಟಿ ಕೃಷ್ಣನ್ ಮಾತನಾಡಿ, “ಮಿನರ್ವ ಕೇಂದ್ರ ಉದ್ಘಾಟನೆಯ ಭಾಗವಾಗಿರುವುದು ಒಂದು ಸೌಭಾಗ್ಯ. ಈ ಪರಿವರ್ತಕ ವೇದಿಕೆಯು ನಾಯಕರನ್ನು ಪೋಷಿಸಲು, ದೃಷ್ಟಿಕೋನಗಳನ್ನು ಬೆಳಸಲು ಮತ್ತು ಮಿತಿಯಿಲ್ಲದ ಸಾಧ್ಯತೆಗಳ ಭವಿಷ್ಯವನ್ನು ಬೆಳೆಸಲು ಸಹಕಾರಿ. ಬೆಂಗಳೂರು ದೇಶದ ಬೌದ್ಧಿಕ ರಾಜಧಾನಿಯಾಗಿದ್ದು, ಕಳೆದ ಕೆಲವು ದಶಕಗಳಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಯಶಸ್ವಿ ಕಲ್ಪನೆಗಳು ಇಲ್ಲಿ ಹುಟ್ಟಿವೆ. ಈ ಕೇಂದ್ರ ಕೂಡ ಅಂತಹದೇ ಭಿನ್ನ ಕಲ್ಪನೆಯ ಶಿಕ್ಷಣ ಒದಗಿಸುತ್ತದೆ” ಎಂದರು.ಡಾ. ದ್ವಾರಿಕಾ ಉನಿಯಾಲ್ ಪ್ರತಿಕ್ರಿಯಿಸಿ, ಕೇಂದ್ರದ ಚಟುವಟಿಕೆಗಳು ಜ್ಞಾನ ಸೃಷ್ಟಿ, ಬ್ರ್ಯಾಂಡ್ ನಿರ್ಮಾಣ ಮತ್ತು ಕಾರ್ಯನಿರ್ವಾಹಕ ಶಿಕ್ಷಣದ ಇತರ ವಿಷಯಗಳ ಕಡೆಗೆ ಗಮನಹರಿಸಲಿವೆ. ರೌಂಡ್ ಟೇಬಲ್ ಚರ್ಚೆಗಳು, ಸೆಮಿನಾರ್ಗಳು, ಪ್ಯಾನಲ್ ಚರ್ಚೆಗಳು, ಕಾರ್ಪೊರೇಟ್ಗಳಿಗೆ ಸಿಮ್ಯುಲೇಶನ್ ಕಾರ್ಯಾಗಾರಗಳು, ಲೇಖಕರ ಸಂವಾದಗಳು, ಸಿಎಕ್ಸ್ಒಗಳಿಂದ ವಿಶೇಷ ಮಾಸ್ಟರ್ ತರಗತಿಗಳು ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.ಎಂದರು
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (ಆರ್ಎಸ್ಎಸ್ಟಿ)ನ ಅಧ್ಯಕ್ಷರಾದ ಡಾ. ಎಂ.ಪಿ.ಶ್ಯಾಮ್, ಗೌರವಾನ್ವಿತ ಕಾರ್ಯದರ್ಶಿ ಡಾ. ಎವಿಎಸ್ ಮೂರ್ತಿ, ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್ ಮತ್ತು ಆರ್ವಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವೈಎಸ್ಆರ್ ಮೂರ್ತಿ ಹಾಗೂ ಟ್ರಸ್ಟಿಗಳು ಮತ್ತು ಅತಿಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ:-ಪ್ರತಾಪ ಚವ್ಹಾಣ್