ಚಡಚಣ: ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಂದ ಅಮನ ಕುಲಕರ್ಣಿಗೆ ವಕೀಲ ವೃತ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಅ.09 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಮ್ಮಿಕೊಂಡ ವಕೀಲರ ಬೃಹತ್ ನೋಂದಣಿ ಕಾರ್ಯಕ್ರಮ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್. ಎಸ್. ಮಿಟ್ಟಲಖೊಡ ಅವರು ಚಡಚಣ ಪಟ್ಟಣದ ನ್ಯಾಯವಾದಿ ಅಶೋಕ ಕುಲಕರ್ಣಿ ಅವರ ಮಗನಾದ ಅಮನ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೀಡುವ ಕರ್ನಾಟಕ ರಾಜ್ಯ ವಕೀಲ ವೃತ್ತಿಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಕೀಲ ಪರಿಷತ್ತಿನ ಅಧ್ಯಕ್ಷರು ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಇದ್ದರು.
ಫೊಟೊ : ಅಕ್ಟೋಬರ 09 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಮ್ಮಿಕೊಂಡ ವಕೀಲರ ಬೃಹತ್ ನೋಂದಣಿ ಕಾರ್ಯಕ್ರಮ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಟ್ಟಣದ ವಕೀಲರಾದ ಅಶೋಕ ಕುಲಕರ್ಣಿ ಅವರ ಮಗನಾದ ಅಮನ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೀಡುವ ಕರ್ನಾಟಕ ರಾಜ್ಯ ವಕೀಲ ವೃತ್ತಿಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ವರದಿ :ಉಮಾಶಂಕರ ಕ್ಷತ್ರಿ




