ಮೊಳಕಾಲ್ಮೂರು:-ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ವಕೀಲರ ಸಂಘ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೊಳಕಾಲ್ಮೂರು ಇವರ ಸಂಯುಕ್ತಾಶ್ರಯದಲ್ಲಿ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಆನಂದ್ ಅವರ ಸಾರಥ್ಯದಲ್ಲಿ, ಶ್ರೀ ರಾಜಶೇಖರ್ ನಾಯಕ್ ಇವರು ನಮ್ಮ ನಿತ್ಯ ಜೀವನದಲ್ಲಿ ಕಾನೂನು ಅವಶ್ಯಕವಾಗಿ ಬೇಕಾಗಿದೆ. ಆದ್ದರಿಂದ ಕಾನೂನನ್ನು ಪ್ರತಿಯೊಬ್ಬರೂ ತಿಳಿಯಲೇಬೇಕಾದ ಅನಿವಾರ್ಯತೆ ಇದೆ ಎಂದು ಉಪನ್ಯಾಸ ನೀಡಿದರು.ವಕೀಲರಾದ ಶ್ರೀಮತಿ ವಿಜಯಲಕ್ಷ್ಮಿ ಇವರು ಕಾನೂನಿನ ನೆರವನ್ನು ಪಡೆಯುವುದು ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ ಚಂದ್ರಿಕಾ ಗೌಡ್ರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಆನಂದ್ ಇವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಶಿಕ್ಷಕರಾದ ಬಿ ಓಬಣ್ಣ ನಿರೂಪಿಸಿದರು. ಜಿ ಸತ್ಯನಾರಾಯಣರಾವ್ ವಂದಿಸಿದರು. ನಿರ್ದೇಶಕರಾದ ಶ್ರೀಮತಿ ಗಿರಿಜಮ್ಮ. ಶ್ರೀಮತಿ ಕೆ ಜಿ ವಾಣಿ. ಶ್ರೀಮತಿ ಸುಗುಣ ಬಾಯಿ, ಶಿಕ್ಷಕರಾದ ಎ ಎಸ್ ಜಾನಕಿ ರಾಮ್, ಶೋಭಾ ಜಿ ಎಸ್, ಜಿ ಮಹಾದೇವಿ ಹಾಗೂ ಸುಜಾತ ಉಪಸ್ಥಿತರಿದ್ದರು
ಗಂಗಾಧರ ಭಾರತ್ ವೈಭವ ನ್ಯೂಸ್.