Join The Telegram | Join The WhatsApp |
ಕಲಘಟಗಿ: ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವ ಜತೆಗೆ ನವ ಚೈತನ್ಯ ಮೂಡಿಸುತ್ತದೆ ಎಂದು ಪ್ರೊವೆನ್ಸಿಯಲ್, ರೆ.ಬ್ರ. ಜಾರ್ಜ್ ಪಡಿಕರ ಅಭಿಪ್ರಾಯ ಪಟ್ಟರು.
ಪಟ್ಟಣದ ಗುಡ್‍ನ್ಯೂಸ್ ಕಾಲೇಜ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟದ ಕಾರ್ಯಕ್ರಮವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಆಸಕ್ತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜೀವನಪೂರ್ತಿ ಅಳವಡಿಸಿಕೊಂಡಾಗ ನಮ್ಮ ಬದುಕಿಗೆ ದಾರಿ ದೀಪವಾಗಲಿದೆ. ನಮ್ಮ ಸಂಸ್ಥೆಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ನಾಡಿನಲ್ಲಿ ಹೆಸರು ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಮಕ್ಕಳಿಗೆ ಹತ್ತಾರು ವರ್ಷಗಳಿಂದ ಕ್ರೀಡಾ ಮನೋಭಾವ ಬೆಳೆಸುವಂತಹ ಚಟುವಟಿಕೆಗಳನ್ನು ನಾವು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಕ್ರೀಡಾಕೂಟದಲ್ಲಿ ಪದವಿ ಕಾಲೇಜಿನ ಮೌಂಟ್‍ಫೋರ್ಟ್ ತಂಡ ಹಾಗೂ ಪ.ಪೂ. ಕಾಲೇಜಿನ ಗ್ಯಾಬ್ರಿಯಲ್ ತಂಡಗಳು ಸಮಗ್ರ ವೀರಾಗ್ರಣ ಪ್ರಶಸ್ತಿ ಪಡೆದವು. ಪದವಿ ಕಾಲೇಜಿನ ರಂಜಿತಾ ಶಿವಣ್ಣವರ, ಸೂರಜ ಲಮಾಣಿ , ಪದವಿ ಪೂರ್ವ ಕಾಲೇಜಿನ ಶ್ರತಿ ಸಾದರ ಮತ್ತು ಈರಣ್ಣ ಕಟಗಿ ವೈಯಕ್ತಿಕ ವೀರಾಗ್ರಣ ಗಳಾಗಿ ಹೊರ ಹೊಮ್ಮಿದರು. ವೆಲ್ಫೆರ್ ಸಂಸ್ಥೆಯ ಕಾರ್ಯದರ್ಶಿ ಡಾ. ರೆ.ಬ್ರ. ವರ್ಗಿಸ್ ಕೆ.ಜೆ. ಆಡಳಿತಾಧಿಕಾರಿ ಡಾ.ಬ್ರ.ಥೊಮಸ್ ಥನಿಕ್ಕಲ್, ಮಾತನಾಡಿದರು. ರೆ.ಬ್ರ. ಮ್ಯಾಥಿವ್ ಪನ್ನಾಥನಾಥ, ರೆ.ಬ್ರ. ಅರುಲ್ ಎಂ., ರೆ.ಬ್ರ. ಅನ್ನೀ ಕುರ್ಯಾಕೋಜ್, ಫಾ. ಜಾರ್ಜ್ ಮೋನೀಸ್, ಫಾ. ಅಲೇಕ್ಸಾಂಡರ್, ರೆ.ಬ್ರ. ವಿಜಯ ಸೆಬಾಸ್ಟೆಯಿನ್, ರೆ.ಬ್ರ. ಆರೋಗ್ಯಸ್ವಾಮಿ, ರೆ.ಬ್ರ. ನಿಜು ಥಾಮಸ್, ರೆ.ಬ್ರ. ಸ್ಟೀಫನ್, ಸಿಸ್ಟರ್ ಲೂಸಿ, ಸಿ. ಜಯಶ್ರೀ, ಬ್ರ. ಜೇಮ್ಸ್, ಪ್ರಾಚಾರ್ಯ ಡಾ. ಬಿ.ಜಿ.ಬಿರಾದಾರ, ಡಾ. ಮಹೇಶ ಹೊರಕೇರಿ, ಪಿ.ಯು. ಕಾಲೇಜಿನ ಪ್ರಭಾರೆ ಪ್ರಾಚಾರ್ಯೆ ಪ್ರೊ. ನವೀನಾ ರಡ್ಡೇರ, ಪ್ರೊ. ಎಂ.ಎಸ್. ಮುರಗೋಡಮಠ, ಪ್ರೊ. ವಿಜಯ ಬೆಟಗಾರ,ಪ್ರೊ. ಶಶಿಕುಮಾರ ಕಟ್ಟಿಮನಿ, ರಾಮು ಲಮಾಣಿ ಪಾಲ್ಗೊಂಡಿದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |