Join The Telegram | Join The WhatsApp |
ಭಾರತೀಯ ಜೀವ ವಿಮಾ ನಿಗಮ – ಎಲ್‌ಐಸಿಯಲ್ಲಿ ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿರುವ ಎಲ್‌ಐಸಿ, ಇಂದಿನಿಂದ ಅರ್ಜಿ ಸ್ವೀಕಾರ ಶುರುಮಾಡಿದೆ.
ಒಟ್ಟು 9394 ಹುದ್ದೆಗಳ ಭರ್ತಿಗೆ ಎಲ್‌ಐಸಿ ಈ ನೇಮಕ ಅಭಿಯಾನ ಕೈಗೊಂಡಿದೆ.
ಹೆಚ್ಚಿನ ಮಾಹಿತಿ ಮತ್ತುಅರ್ಜಿ ಸಲ್ಲಿಕೆಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ licindia.in ಗಮನಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಶುರು – 21 ಜನವರಿ 2023
ಅರ್ಜಿ ಸಲ್ಲಿಕೆಗೆ ಕೊನೇ ದಿನ – 10 ಫೆಬ್ರವರಿ 2023
ಕಾಲ್ ಲೆಟರ್ ಡೌನ್‌ಲೋಡ್ – 4 ಮಾರ್ಚ್ 2023
ಪ್ರಿಲಿಮಿನರಿ ಎಕ್ಸಾಂ ದಿನಾಂಕ – 12 ಮಾರ್ಚ್ 2023
ಮೇನ್ ಎಕ್ಸಾಂ ದಿನಾಂಕ – 8 ಏಪ್ರಿಲ್ 2023
ಖಾಲಿ ಹುದ್ದೆ ಎಲ್ಲಿ ಎಷ್ಟು -ವಿವರ
ದಕ್ಷಿಣ ವಲಯ ಕಚೇರಿ – 1516 ಹುದ್ದೆ
ಸೌತ್ ಸೆಂಟ್ರಲ್ ವಲಯ ಕಚೇರಿ – 1408 ಹುದ್ದೆ
ಉತ್ತರ ವಲಯ ಕಚೇರಿ – 1216 ಹುದ್ದೆ
ನಾರ್ತ್ ಸೆಂಟ್ರಲ್ ವಲಯ ಕಚೇರಿ – 1033 ಹುದ್ದೆ
ಪೂರ್ವ ವಲಯ ಕಚೇರಿ – 1049 ಹುದ್ದೆ
ಈಸ್ಟ್ ಸೆಂಟ್ರಲ್ ವಲಯ ಕಚೇರಿ – 669 ಹುದ್ದೆ
ಸೆಂಟ್ರಲ್ ವಲಯ ಕಚೇರಿ – 561 ಹುದ್ದೆ
ಪಶ್ಚಿಮ ವಲಯ ಕಚೇರಿ – 1942 ಹುದ್ದೆ
ಅರ್ಹತಾ ಮಾನದಂಡಗಳು ಹೀಗಿವೆ
ಅಭ್ಯರ್ಥಿಗಳ ವಯೋಮಿತಿಯು 21 ವರ್ಷದಿಂದ 30 ವರ್ಷ ವಯಸ್ಸಿನೊಳಗೇ ಇರಬೇಕು.
ಆಯ್ಕೆ ಪ್ರಕ್ರಿಯೆ
ಎಲ್‌ಐಸಿಯಲ್ಲಿ ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್‌ಗಳ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ. ಆಯ್ಕೆಯನ್ನು ಆನ್‌ಲೈನ್ ಟೆಸ್ಟ್ ಮತ್ತು ಅದರಲ್ಲಿ ಉತ್ತೀರ್ಣರಾದ ಅರ್ಹರ ಸಂದರ್ಶನ ನಡೆಯಲಿದೆ. ಅದೇ ರೀತಿ ನೇಮಕಾತಿ ಪೂರ್ವದ ಮೆಡಿಕಲ್ ಎಕ್ಸಾಮಿನೇಷನ್‌ನಲ್ಲೂ ಉತ್ತೀರ್ಣರಾಗಬೇಕು.
ಅರ್ಜಿ ಶುಲ್ಕ ವಿವರ
ಎಲ್‌ಐಸಿಯಲ್ಲಿ ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್‌ಗಳ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳ ಹೊರತಾದವರು 750 ರೂಪಾಯಿ ಪಾವತಿಸಬೇಕು.
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಾದರೆ 100 ರೂಪಾಯಿ ಶುಲ್ಕ ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಟ್, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್ ಬಳಸಿಕೊಂಡು ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.
Join The Telegram | Join The WhatsApp |