ಬೆಂಗಳೂರು : ಕೆರೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಇಬ್ಬರು ಪ್ರೇಮಿಗಳು ಅಂಜನಾಪುರದ ತುಳಸೀಪುರದ ಕೆರೆಗೆ ಹಾರಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಶ್ರೀಕಾಂತ್, ಅಂಜನಾ ಎಂದು ಗುರುತಿಸಲಾಗಿದೆ.
ಬಿಕಾಂ ಓದುತ್ತಿದ್ದ ಶ್ರೀಕಾಂತ್ ಹಾಗೂ ಬಿ.ಎ ಓದುತ್ತಿದ್ದ ಅಂಜನಾ ಮೃತಪಟ್ಟಿದ್ದಾರೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಬ್ಬರು ಪ್ರೇಮಿಗಳು ಕಾಣೆಯಾಗಿದ್ದರು. ಪೋಷಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.
ಅಲ್ಲದೇ ಯುವಕನ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಆದರೀಗ ಇಬ್ಬರು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.