Join The Telegram | Join The WhatsApp |
ಬೆಳಗಾವಿ: ನಗರದ ಸಮೀಪ ಇರುವ ಮಚ್ಚೆ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಒಟ್ಟಿಗೆ ಸೇರಿ, ಆಮ್ ಆದ್ಮಿ ಪಕ್ಷದ ಮುಂದಾಳತ್ವದಲ್ಲಿ ಇಂದು ಮಚ್ಚೆ ಗ್ರಾಮದ ಪಟ್ಟಣ ಪಂಚಾಯತಿಯ ಎದುರು ಪ್ರತಿಭಟನೆ ಮಾಡಿದರು…
ಮಚ್ಚೆ ಗ್ರಾಮದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿದೀಪ, ರಸ್ತೆ, ಕಸತೆರವು, ಗುಂಡಿಗಳ ಮುಚ್ಚುವಿಕೆ, ಹೀಗೆ ಹಲವಾರು ಸಮಸ್ಯೆಗಳು ಹಲವಾರು ವರ್ಷಗಳಿಂದ ಹಾಗೆ ಇದ್ದು, ಎಸ್ಟೋ ಸಲ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು…
ಈ ವೇಳೆ ಮಾತನಾಡಿದ ಆಪ್ ಪಕ್ಷದ ಮುಖಂಡರಾದ ಶಂಕರ ಹೆಗಡೆ ಅವರು ಕಳೆದ ಸುಮಾರು ವರ್ಷಗಳಿಂದ ಇಲ್ಲಿ ಯಾವ ಮೂಲ ಸೌಕರ್ಯಗಳು ಇಲ್ಲ, ರಾಜಕೀಯ ದುರುದ್ದೇಶದಿಂದ, ರಾಜಕೀಯ ವ್ಯಕ್ತಿಗಳ ಮಾತಿಗೆ ಮರುಳಾಗಿ ಅಧಿಕಾರಿಗಳು ಇಲ್ಲಿ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಮಾಡಿದರು, ಮುಖ್ಯವಾಗಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿದೀಪ, ಅಪಾಯಕ್ಕೆ ಕಾದಿರುವ ದೊಡ್ಡ ದೊಡ್ಡ ತಗ್ಗುಗಳು, ಸುರಕ್ಷಿತ ರಸ್ತೆ, ಕಸದ ಸಾಗಾಣಿಕೆ, ಹೀಗೆ ಹಲವಾರು ಸಮಸ್ಯಗಳಿಂದ ಇಲ್ಲಿನ ಜನ ಬೇಸತ್ತಿದ್ದಾರೆ, ಆದರೂ ಅಧಿಕಾರಿಗಳು ಅದರ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಮಾಡಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು..
ಈ ವೇಳೆ ಅನೇಕ ಗ್ರಾಮಸ್ಥರು ಮಾತನಾಡಿ ತಮ್ಮ ಸಮಸ್ಯ ಹೇಳಿಕೊಂಡರು..
ಈ ಪ್ರತಿಭಟನೆಯಲ್ಲಿ ಆಪ ಪಕ್ಷದ ಅಸ್ಲಾಂ ತಹಶೀಲ್ದಾರ, ಶಂಕರ ಹೆಗಡೆ, ಶಬ್ಬಿರ ಮುಲ್ಲಾ, ಪಾರುಕ್ ಗಿರಿಯಾಲ, ಶಾಲಿದ ದೇವಲಾಪುರ, ವಿಠ್ಠಲ ಗೊರಲ, ಆಯೇಷಾ ಹತ್ರೊಟ್ಟಿ, ದೀಪಾ ಪೋಜಗಿ, ಆರತಿ ಕಾಂಬ್ಳೆ ಮತ್ತಿತರರು ಉಪಸ್ಥಿತರಿದ್ದರು ..
ವರದಿ ಪ್ರಕಾಶ ಕುರಗುಂದ.
Join The Telegram | Join The WhatsApp |