Join The Telegram | Join The WhatsApp |
ಬೆಳಗಾವಿ: ಗುರುವಾರ ದಿನಾಂಕ 08/12/22 ರಂದು ಕಣಬರಗಿಯಲ್ಲಿ ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ M R H S ವತಿಯಿಂದ ಕನಬರಗಿ ಯಲ್ಲಿ ಶಿವಶರಣ ಮಾದರ ಚೆನ್ನಯ್ಯನವರ 972 ನೆಯ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
MRHS ಅಧ್ಯಕ್ಷ ಶ್ರೀ ಬಸವರಾಜ ಅರವಳ್ಳಿ ಇವರು ಶಿವಶರಣ ಮಾದರ ಚೆನ್ನೈಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶಿವಶರಣ ಮಾದರ ಚೆನ್ನೈಯ್ಯ ನವರ ಶಿವಭಕ್ತಿ ವೃತ್ತಾಂತದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ M R H S ಉಪಾಧ್ಯಕ್ಷ ಗೋಪಾಲ ನಂದಿ , ಕಾರ್ಯದರ್ಶಿ ಪರಶುರಾಮ ಒಂಟಮುರಿ, ಮಾದಿಗ ಸಮುದಾಯದ ಮುಖಂಡರಾದ ಯಲ್ಲಪ್ಪ ಹುದಲಿ, ಹಾಗೂ ಕಣಬರಗಿಯ ಮಾದಿಗ ಸಮಾಜದ ಎಲ್ಲ ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು…
ಈ ವೇಳೆ ಮಹಾಪ್ರಸಾದ ಆಯೋಜನೆ ಕೂಡಾ ಮಾಡಿದ್ದು, ಎಲ್ಲಾ ಜನರು ಬಂದು ಶೃದ್ಧಾ ಭಕ್ತಿಯಿಂದ ಜಯಂತಿ ಆಚರಿಸಿ ಮಹಾಪ್ರಸಾದ ಪಡೆದರು..
ವರದಿ : ಪ್ರಕಾಶ್ ಕುರಗುಂದ…
Join The Telegram | Join The WhatsApp |