Join The Telegram | Join The WhatsApp |
ರಾಜಸ್ಥಾನ್ : ನನ್ನ ಮುಂದೆ ಸೆಕ್ಸ್ ಮಾಡಿ ಅಂತ ಹೇಳಿ ಹಾಗೆ ಮಾಡುತ್ತಿದ್ದಾಗ ಅವರ ಮೇಲೆ ಫೆವಿಕ್ವಿಕ್ ಸುರಿದು 55 ವರ್ಷದ ಮಾಂತ್ರಿಕ ಇಬ್ಬರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನ್ ನ ಉದಯ್ ಪುರ ಜಿಲ್ಲೆಯ ಕೆಲಬಾವಡಿ ಕಾಡಿನಲ್ಲಿ ನಡೆದಿದೆ.
ಅನ್ಯ ಕೋಮಿನ 30 ವರ್ಷದ ಶಿಕ್ಷಕ ರಾಹುಲ್ ಮೀನಾ ಮತ್ತು 28 ವರ್ಷದ ಸೋನು ಕನ್ವರ್ ತಾಂತ್ರಿಕ ಸುರಿದ ಫೆವಿಕ್ವಿನ್ ನಿಂದ ಹೊರಬರಲು ಆಗದೇ ಮೃತಪಟ್ಟ ದುರ್ದೈವಿಗಳು.
ಇಬ್ಬರ ಬೆತ್ತಲೆ ದೇಹ ಕಾಡಿನಲ್ಲಿ ಪತ್ತೆಯಾಗಿದ್ದು ಇಡೀ ದೇಹ ಫೆವಿಕ್ವಿಕ್ ನಿಂದ ಆವರಿಸಿತ್ತು. ಮಾಂತ್ರಿಕ ಭಾವಲೇಶ್ ಕುಮಾರ್ ಈಗ ಪೊಲೀಸ್ ಅತಿಥಿಯಾಗಿದ್ದಾನೆ.
ಭಾಡವಿ ಗುದ್ ಬಳಿಯ ಇಚ್ಚಾ ಪೂರ್ಣ ಶೇಷನಾಗ್ ಭಾವ್ ಜೀ ಮಂದಿರಕ್ಕೆ ಮೃತರ ಇಬ್ಬರ ಕುಟುಂಬಗಳು ಭೇಟಿ ಮಾಡುತ್ತಿದ್ದವು. ಈ ವೇಳೆ ಸೋನು ಮತ್ತು ರಾಹುಲ್ ಪರಸ್ಪರ ಭೇಟಿ ಆಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸೋನು ಕನ್ವರ್ ಮತ್ತು ರಾಹುಲ್ ಮೀನಾಗೆ ಮೊದಲೇ ಮದುವೆ ಆಗಿತ್ತು.
ಸೋನು ಮತ್ತು ರಾಹುಲ್ ಸಂಬಂಧ ಗಟ್ಟಿಯಾಗುತ್ತಿದ್ದಂತೆ ರಾಹುಲ್ ಪತ್ನಿ ಜೊತೆ ಜಗಳ ಆಡಲು ಆರಂಭಿಸಿದ. ಇದರಿಂದ ಬೇಸತ್ತ ಪತ್ನಿ ಮಾಂತ್ರಿಕನ ಮೊರೆ ಹೋಗಿದ್ದಳು.
ಸುಮಾರು 8 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿದ್ದ ಮಾಂತ್ರಿಕ ಸೋನುಗೆ ಕೂಡ ಹತ್ತಿರದವನಾಗಿದ್ದ. ರಾಹುಲ್ ಪತ್ನಿ ಹೇಳುತ್ತಿದ್ದಂತೆ ವಿಷಯ ಸಂಗ್ರಹಿಸಿ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವುದನ್ನು ಬಹಿರಂಗಪಡಿಸಿದ. ಇದರಿಂದ ಸಿಟ್ಟಿಗೆದ್ದ ರಾಹುಲ್ ಮತ್ತು ಸೋನು ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾದರೆ ಸುಳ್ಳು ಲೈಂಗಿಕ ದೌರ್ಜನ್ಯ ಕೇಸು ದಾಖಲಿಸುವುದಾಗಿ ಬೆದರಿಕೆ ಒಡ್ಡಿದರು.
ಗ್ರಾಮದಲ್ಲಿ ತನ್ನ ಗೌರವಕ್ಕೆ ಧಕ್ಕೆ ಆಗಬಹುದು ಎಂದು ಹೆದರಿದ ಮಾಂತ್ರಿಕ ಇಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ತಂತ್ರ ರೂಪಿಸಿದ. ನವೆಂಬರ್ 15ರಂದು ಇಬ್ಬರನ್ನು ಕಾಡಿಗೆ ಕರೆಸಿದ ಮಾಂತ್ರಿಕ ನನ್ನ ಮುಂದೆ ಸೆಕ್ಸ್ ಮಾಡಿ ಎಂದು ಪ್ರಚೋದಿಸಿದ.
ಸುಮಾರು 50 ಕ್ಯೂಬ್ ಫೆವಿಕ್ವಿಕ್ ಅನ್ನು ದೊಡ್ಡ ಬಾಟಲಿಯಲ್ಲಿ ಸಂಗ್ರಹಿಸಿದ್ದ ಮಾಂತ್ರಿಕ ಇಬ್ಬರು ಬೆತ್ತಲಾಗಿ ಸೆಕ್ಸ್ ಮಾಡುವ ವೇಳೆ ಇಬ್ಬರ ಮೇಲೆ ಸುರಿದಿದ್ದಾನೆ. ಇಬ್ಬರೂ ಅಂಟಿಕೊಂಡು ಬಿಡಿಸಿಕೊಳ್ಳಲು ಪರದಾಡಿದ್ದಾರೆ. ಫೆವಿಕ್ವಿಕ್ ಗಟ್ಟಿಯಾಗುತ್ತಿದ್ದಂತೆ ಅವರ ಚರ್ಮ ಕಿತ್ತು ಬಂದಿದೆ. ರಾಹುಲ್ ಅವರ ಮರ್ಮಾಂಗ ಕಿತ್ತು ಬಂದರೆ ಸೋನು ಖಾಸಗಿ ಅಂಗ ಘಾಸಿಗೊಂಡಿದೆ.
ಎರಡು ಜೀವಗಳು ಫೆವಿಕ್ವಿಕ್ ನಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ ಮಾಂತ್ರಿಕ ರಾಹುಲ್ ಕತ್ತು ಸೀಳಿ ಕೊಲೆ ಮಾಡಿದರೆ, ಸೋನುಳನ್ನು ಇರಿದು ಹತ್ಯೆ ಮಾಡಿದ್ದಾನೆ. ಆಕ್ಷೇಪಾರ್ಹ ಭಂಗಿಯಲ್ಲಿ ಅವರನ್ನು ಸಿಕ್ಕಿಸಿ ಜನರ ಮುಂದೆ ಮಾನ ತೆಗೆಯಬಹುದು ಹಾಗೂ ಅವರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಮಾಂತ್ರಿಕ ಈ ಯೋಜನೆ ರೂಪಿಸಿದ್ದ.
ಘಟನೆ ನಡೆದ ಪ್ರದೇಶ ವ್ಯಾಪ್ತಿಯಲ್ಲಿ ಹಾಕಲಾಗಿದ್ದ 50 ಸಿಸಿಟಿವಿ ದೃಶ್ಯ ಹಾಗೂ ಘಟನಾ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಆಧರಿಸಿ ಮಾಂತ್ರಿಕನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Join The Telegram | Join The WhatsApp |