ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಹಮ್ಮದುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 39 ವರ್ಷ ವಯಸ್ಸಿನ ಮಾಜಿ ಬ್ಯಾಟುಗಾರ ಬಾಂಗ್ಲಾ ತಂಡದ ಪ್ರಮುಖ ಬ್ಯಾಟುಗಾರರಲ್ಲಿ ಒಬ್ಬರಾಗಿದ್ದರು. ಬುಧವಾರ ತಮ್ಮ ಸೋಸಿಯಲ್ ಮಿಡಿಯಾ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಕಾಲ ಅವರು ಬಾಂಗ್ಲಾ ತಂಡವನ್ನು ಪ್ರತಿನಿಧಿಸಿದ್ದು, ಬಿರುಸಿನ ಮದ್ಯಮ ಕ್ರಮಾಂಕದ ಬ್ಯಾಟ್ಸಮನ್ ಎನಿಸಿದ್ದರು.