Join The Telegram | Join The WhatsApp |
ನಿಪ್ಪಾಣಿ: ನಿನ್ನೆ ಶುಕ್ರವಾರ ದಿನಾಂಕ 23ರಂದು ಮಹಾರಾಷ್ಟ್ರದ ಚಿಕಲಿ ಗ್ರಾಮದಿಂದ ಗಡಿ ಭಾಗ ಕೋಡ್ನಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಎಂಬ ಮಾದಕ ವಸ್ತು ಕಾಲನಡಿಗೆಯಲ್ಲಿ ಗಾಯಕನವಾಡಿ ಯತ್ತ ಸಾಗಿಸುತ್ತಿದ್ದ ಕೇದಾರನಾಥ ಪ್ರಹ್ಲಾದ ಸುತಾರ ಸಾಕಿನ ಶಿರಗುಪ್ಪಿ ತಾಲೂಕ ನಿಪ್ಪಾಣಿ ಎಂಬುವನನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಚಿಕ್ಕೋಡಿ ಡಿ ಎಸ ಪಿ ಶ್ರೀ ಬಸವರಾಜ ಯಾಲಿಗಾರ, ಹಾಗೂ ಸಿಪಿಐ ಗಳಾದ ಸಂಗಮೇಶ್ ಶಿವಯೋಗಿ, ಮತ್ತು ಗ್ರಾಮೀಣ ಪಿಎಸ್ಐ ರಾದ ಅನಿಲ ಕುಂಭಾರ, ಮತ್ತು ಇವರಿಗೆ ಸಂಬಂಧಪಟ್ಟ ಸಿಬ್ಬಂದಿಗಳಾದ ಕಲ್ಲಯ್ಯ ಹಿರೇಮಠ, ರಾಘವೇಂದ್ರ ಮೇಲಗಡೆ. ಹಾಗೂ ಇನ್ನಿತರರ ಸಿಬ್ಬಂದಿಗಳೊಂದಿಗೆ ಆರೋಪಿಯನ್ನು ಅಡ್ಡಗಟ್ಟಿ ಪರಿಶೀಲನೆ ಮಾಡಿದಾಗ ಸುಮಾರು 6,000 ಕೆಮ್ಮತ್ತಿನ 430 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಕುರಿತು ಕೇದಾರನಾಥ್ ಸುತಾರ್ ಎಂಬ ಆರೋಪಿಯ ಮೇಲೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಅನಿಲ ಕುಂಭಾರ ಇವರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ರಾಜು ಮುಂಡೆ
Join The Telegram | Join The WhatsApp |