Join The Telegram | Join The WhatsApp |
ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಡಬಲ್ ಮರ್ಡರ್ ಪ್ರಕರಣ ನಡೆದಿದ್ದು, ಹೆಂಡತಿ ಮತ್ತು ಅತ್ತೆಯನ್ನು ಕೊಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ವಿಜಯಪುರ ನಗರದ ನವಭಾಗ್ ಪ್ರದೇಶದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಕಟ್ಟಿಗೆಯಿಂದ ಹೊಡೆದು ಅತ್ತೆ ಮತ್ತು ಪತ್ನಿಯನ್ನು ಪತಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಪತ್ನಿ ರೂಪಾ(32), ಅತ್ತೆ ಕಲ್ಲವ್ವ(55) ಮೃತರು. ಮಲ್ಲಿಕಾರ್ಜುನ ಹತ್ಯೆಗೈದ ವ್ಯಕ್ತಿ.
ನವಭಾಗ್ನಲ್ಲಿ ಬಾಡಿಗೆ ಮನೆಯಲ್ಲಿ ಅತ್ತೆ, ಮೂವರು ಮಕ್ಕಳು, ಪತ್ನಿ ಜೊತೆ ಮಲ್ಲಿಕಾರ್ಜುನ ಮೇತ್ರಿ ವಾಸವಿದ್ದ. ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಿ ಗಾಂಧಿಚೌಕ್ ಠಾಣೆಗೆ ಬಂದು ಮಲ್ಲಿಕಾರ್ಜುನ ಶರಣಾಗಿದ್ದಾನೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿರುವ ಪ್ರಕರಣ ದಾಖಲಾಗಿದೆ.
Join The Telegram | Join The WhatsApp |