Join The Telegram | Join The WhatsApp |
ಸವದತ್ತಿ : ತಾಲೂಕಿನ ಮದ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮದ್ಲೂರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಸಿಪಿಟಿ ನಿರ್ಮಾಣ ಮಾಡುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಮನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಫಕೀರವ್ವ ಮಾ. ಹೂಲಿ ಸಸಿಗೆ ನೀರು ಹಾಕುವುರ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು.
ಬಳಿಕ ತಾಪಂ ಐಇಸಿ ಸಂಯೋಜಕರಾದ ಮಲೀಕಜಾನ ಮೋಮಿನ ಮಾತನಾಡಿದ ಈಗಿನ ಸಂದರ್ಭದಲ್ಲಿ ಯಾರು ಕೂಡಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಗ್ರಾಮೀಣ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಆರೋಗ್ಯದ ಕಾಳಜಿ ವಹಿಸುವುದು ಕೂಡ ನರೇಗಾ ಯೋಜನೆಯ ಭಾಗವಾಗಿದೆ. ಪ್ರತಿಯೊಬ್ಬ ಕೂಲಿಕಾರರು ಇ-ಶ್ರಮ ಕಾರ್ಡನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಐಸಿಟಿಸಿ ಕೌನ್ಸಿಲರ ಮಹಾಂತೇಶ ಬ. ಹಿರೇಮಠ ಮಾತನಾಡಿ ಎಲ್ಲಾ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ಉತ್ತಮ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಜೊತೆಗೆ ನೆಮ್ಮದಿಯ ಜೀವನಕ್ಕೆ ನಾವು ಉತ್ತಮ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ಆರೋಗ್ಯ ಶಿಬಿರದಲ್ಲಿ ಮನರೇಗಾ ಕೂಲಿಕಾರರಿಗೆ ಉದ್ಯೋಗ ಚೀಟಿಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಎಸ್. ಎನ್ ಕಡಹಳ್ಳಿ ತಾಪಂ ತಾಂತ್ರಿಕ ಸಂಯೋಜಕರಾದ ಮಹಾದೇವ ಕಾಮನ್ನವರ, ತಾಂತ್ರಿಕ ಸಹಾಯಕರುಗಳಾದ ಯಲ್ಲಪ್ಪ ಕಾಮನ್ನವರ, ಅನಿಲ ಹಕಾರಿ, , ಗ್ರಾಪಂ ಸಿಬ್ಬಂದಿಗಳಾದ ಎಸ್ ಎಫ್ ದೊಡಮನಿ, ಬಿ. ಎಲ್. ಹೊಟ್ಟಿನವರ ಗ್ರಾಪಂ ಸದಸ್ಯರುಗಳಾದ ಸಣ್ಣನಿಂಗಪ್ಪ ಪ ಪಚ್ಚಿನವರ, ಪುಂಡಲೀಕ ಪ. ಉಪ್ಪಾರ, ಸೋಮಪ್ಪ ಬ. ಕಲ್ಲೋಳ್ಳಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಪ್ರಕಾಶ ಪಿ. ಮಾಂಗ, ಶ್ರೀ ಹಣಮಂತರಾವ ಸಿ. ಪಚ್ಚಿನವರ, ಬಿಎಫ್ ಟಿ ಉಮೇಶ ಗೋರವನಕೊಳ್ಳ, ಗ್ರಾಮ ಕಾಯಕ ಮಿತ್ರರಾದ ಶ್ರೀಮತಿ ಪವಿತ್ರಾ ದೇ. ಮಾದರ ಆಶಾ ಕಾರ್ಯಕರ್ತೆಯರು, ಕೂಲಿಕಾರರು ಹಾಜರಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಘವೇಂದ್ರಕುಮಾರ ಎಸ್ ಪಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ ಎಸ್ ಬಟಕುರ್ಕಿ ವಂದಿಸಿದರು.
Join The Telegram | Join The WhatsApp |