Join The Telegram | Join The WhatsApp |
ಧಾರವಾಡ: ರಾಜ್ಯದ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಬಹುಮತ ಸಾಬೀತಾಗುವದು ಖಚಿತ . ಸ್ಪಷ್ಟ ಬಹುಮತದೊಂದಿಗೆ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುವ ಮೂಲಕ ಸಚಿವ ಹಾಲಪ್ಪ ಆಚಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಕಬ್ಬಡ್ಡಿ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಸಮೀಕ್ಷೆ ಕೂಡ ಅಂದುಕೊಂಡಂತೆ ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದರು.
ಶೇ.40 ರಷ್ಟು ಸರ್ಕಾರ ಅನ್ನುವುದಕ್ಕೆ ಅವರಲ್ಲಿ ಯಾವುದೇ ಆಧಾರವಿಲ್ಲ ಪ್ರಚಾರಕ್ಕೆ ಆರೋಪ ಮಾಡುತ್ತಾರೆ:
ಸಚಿವ ಮಾಧುಸ್ವಾಮಿ ವಿರೋಧ ಪಕ್ಷದವರಿಗೆ ಗಟ್ಟಿಯಾಗಿ ಮಾತನಾಡದೇ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾವು ಎಲ್ಲ ಮಾತನಾಡುತ್ತೇವೆ. ಕಾಂಗ್ರೆಸ್ ಬರೀ ಪೊಳ್ಳು ಭರವಸೆ ಕೊಡುತ್ತದೆ. ನಾವು ಕೊಟ್ಟ ಕಾರ್ಯಕ್ರಮಗಳನ್ನು ಡಬಲ್ ಮಾಡಿ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಹೇಳಲು ಏನೂ ಇಲ್ಲ. ಅವರು ಪುಕ್ಕಟೆ ಪ್ರಚಾರ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮಾಡುವ ಶೇ.40 ರಷ್ಟು ಸರ್ಕಾರ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವರದಿ: ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |