This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಗ್ರಾಮೀಣ ಭಾಗದ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ

Join The Telegram Join The WhatsApp

ಕೊಪ್ಪಳ: ಗ್ರಾಮೀಣ ಭಾಗದ ರಸ್ತೆ ಹಾಗೂ ಅತೀ ಅವಶ್ಯಕ ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಕನೂರು ಗ್ರಾಮದ ಹತ್ತಿರ 4.95 ಕೋಟಿ ವೆಚ್ಚದಲ್ಲಿ ರಾರಾವಿ-ಬೇಲೂರು ರಸ್ತೆಯ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಭಾನುವಾರ ಮಾತನಾಡಿದರು. ಈ ಹಿಂದೆ ಆಡಳಿತ‌ ನಡೆಸಿದ ಸರ್ಕಾರ ಹಾಗೂ ಯಾವೊಬ್ಬ ಜನಪ್ರತಿನಿಧಿಗಳು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹಳ್ಳಗಳಿಗೆ ಸೇತುವೆ ನಿರ್ಮಾಣ ಮಾಡುವ ಪ್ರಯತ್ನ ಮಾಡಲಿಲ್ಲ. ಆ ಪುಣ್ಯಾತ್ಮರ ತಪ್ಪಿನಿಂದಾಗಿ ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ಮಳೆಗಾಲದಲ್ಲಿ ತೊಂದರೆ ಅನುಭವಿಸುವುದರ ಜೊತೆಗೆ ಕಳೆದ ಎರಡು ವರ್ಷದಲ್ಲಿ ಎಂಟು ಜನ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಗ್ರಾಮದ ನಾಲ್ಕು ಜನ ರೈತ ಮಹಿಳೆಯರು ಇತ್ತೀಚಿಗೆ ಸುರಿದ ಮಳೆಯಿಂದಾಗಿ ಅಕ್ಟೊಬರ್ 1 ರಂದು ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲು ಆಗಮಿಸಿದಾಗ ಸಾರ್ವಜನಿಕರು ನನಗೆ ಸೇತುವೆ ನಿರ್ಮಾಣ ಮಾಡುವವರೆಗೂ ಸಂಕನೂರಿಗೆ ಆಗಮಿಸದಂತೆ ನಿರ್ಬಂಧ ಹಾಕಿದ್ದರು. ಅಂದೇ ತೀರ್ಮಾನ ಮಾಡಿ, ಈ ಭಾಗದ ಜನರ ಬಹು ದಿನದ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ ಸರ್ಕಾರ 4.95 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಅದರ ಭೂಮಿ ಪೂಜೆ ನೆರವೇರಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಇದೇ ಸಂದರ್ಭದಲ್ಲಿ ಸಂಕನೂರ ಗ್ರಾಮದಲ್ಲಿ 68.ಲಕ್ಷ ವೆಚ್ಚದಲ್ಲಿ ಕೆರೆ, ಹಾಗೂ 20.ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ, 30.ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿ ಉದ್ಘಾಟನೆ ಮಾಡಲಾಗಿದೆ. ಸಂಕನೂರು ಗ್ರಾಮಕ್ಕೆ ಹೊಸ ಕೆರೆ ಮಾಡಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಿ, ಗ್ರಾಮಸ್ಥರ ಬೇಡಿಕೆ ಇಲ್ಲದಿದ್ದರೂ ಸಹ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ‌ ಎಂದರು.

ಕೊಪ್ಪಳ ಏತ್‌ ನೀರಾವರಿ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವ ರಾಯರಡ್ಡಿಯವರು ಇದು ಅಡಿಗಲ್ಲು ಅಲ್ಲ ಅಡ್ಡಗಾಲು ಎಂದು ವ್ಯಂಗ್ಯ ಮಾಡಿದರು.
ಆದರೆ, 2013 ರಲ್ಲಿ ತುಂಗೆಯಿಂದ ಕೃಷ್ಣೆಯಡೆಗೆ ಪಾದಯಾತ್ರೆ ಮಾಡಿ, ಕೂಡಲ ಸಂಗಮನ ಮೇಲೆ ಆಣೆ ಮಾಡಿ, ಅಧಿಕಾರ ಅನುಭವಿಸಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಿದ ಕಾಂಗ್ರೆಸ್ ನವರು ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ಕೊಡಿಸಲು ಸಾಧ್ಯವಾಗಲಿಲ್ಲ. ರಾಯರಡ್ಡಿ ತಾವು ಮಂತ್ರಿಯಾದರು ಸಹ ಅನುದಾನ ತರುವಲ್ಲಿ ವಿಫಲವಾಗಿದ್ದರು. ಯಾಕೆ ನಾವು ಯಾರಾದರೂ ನೀರು ತರಬೇಡ ಅಂತಾ ರಾಯರಡ್ಡಿಗೆ ಹೇಳಿದ್ದರಾ? ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡನೇ ಹಂತದ ಯೋಜನೆಗೆ ಬೇಕಾದ ಅನುದಾನವನ್ನು ಬೆನ್ನು ಬಿಡದೇ ತಂದು ಕಾಮಗಾರಿ ತ್ವರಿತಗತಿಯಲ್ಲಿ ಸಾಗುವಂತೆ ಮಾಡಿದ್ದೇನೆ ಎಂದರು.

ಗ್ರಾಮದ ಬಹು ದಿನದ ಬೇಡಿಕೆಯನ್ನು ಈಡೇರಿಸಿದ ಸಚಿವ ಹಾಲಪ್ಪ ಆಚಾರಗೆ ಗ್ರಾಮಸ್ಥರು ದಾರಿಯುದ್ದಕ್ಕೂ ಹೂಗಳನ್ನು ಹಾಕಿ ಸ್ವಾಗತಿಸುವುದರ‌ ಜೊತೆಗೆ ಸನ್ಮಾನಿಸಿ, ಗೌರವಿಸಿದರು.

ಗ್ರೇಡ್-2 ತಹಶಿಲ್ದಾರ ನಾಗಪ್ಪ ಸಜ್ಜನ, ಪಿಡಬ್ಲ್ಯೂಡಿ ಎಇಇ ಐ.ಎಸ್.ಹೊಸೂರು, ಗ್ರಾಪಂ ಅಧ್ಯಕ್ಷೆ ಬಸವಣೆವ್ವ ಮುಖಪ್ಪ‌ ಕಟ್ಟಿಮನಿ, ಉಪಾಧ್ಯಕ್ಷೆ ಸುಮಿತ್ರಾ ಮಲ್ಲನಗೌಡ ಪೊಲೀಸ್ ಪಾಟೀಲ್, ಸದಸ್ಯರಾದ ಫಾತೀಮಾ‌ ಖಾಜಾಸಾಬ ಅಮರಾವತಿ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮುಖಂಡರಾದ ಸಿ.ಎಚ್.ಪಾಟೀಲ್, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ, ಬಸವನಗೌಡ ತೊಂಡಿಹಾಳ, ಶಿವಕುಮಾರ್ ನಾಗಲಾಪುರಮಠ, ರತನ್ ದೇಸಾಯಿ, ಶಾಮೀದ ಸಾಬ ಮುಲ್ಲಾ, ಮಾರುತಿ ಗವರಾಳ, ಶಂಭು ಜೋಳದ ಇದ್ದರು.


Join The Telegram Join The WhatsApp
Bharath Vaibhav
the authorBharath Vaibhav

Leave a Reply