ಬೆಳಗಾವಿ:- ಮಾಜಿ ಸಂಸದ ಡಿ ಬಿ ಚಂದ್ರೇಗೌಡ ಅವರ ನಿಧನಕ್ಕೆ ಲೋಕೋಪಯೋಗಿ ಇಲಾಖೆ ಸಚಿವರಾದಂತಹ ಸತೀಶ್ ಜಾರಕಿಹೊಳಿರ್ ಯವರು , ಡಿ ಬಿ ಚಂದ್ರೇಗೌಡ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇವರು ಕಾಂಗ್ರೆಸ್ ನಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಿದ್ದು ಇವರ ನಿಧನ ಎಲ್ಲರಿಗೂ ಮನಸ್ಸಿಗೆ ನೋವುಂಟು ಮಾಡುವಂಥಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡಿಬಿ ಚಂದ್ರೇಗೌಡ ಅವರು ಸಭಾಪತಿಗಳಾಗಿ, ಸಚಿವರಾಗಿ, ಶಾಸಕರಾಗಿ, ರಾಜಕಾರಣದ ಹಲವಾರು ಮಗ್ಗಲುಗಳನ್ನು ಅರಿತಿದ್ದು ಕಾಂಗ್ರೆಸ್ ಪಕ್ಷದಿಂದ ಬೆಳೆದು ಇನ್ನಿತರರಿಗೂ ಬೆಳೆಸುವ ವ್ಯಕ್ತಿಗಳಾಗಿದ್ದು ಕಾಂಗ್ರೆಸ್ ಪಕ್ಷ ಇವರ ಕಾರ್ಯಗಳನ್ನು ನೆನೆದು ಕಣ್ಣೀರಿಡುವಂತಾಗಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಇವರ ಕುಟುಂಬಸ್ಥರಿಗೆ ದೇವರು ಧೈರ್ಯ ನೀಡಲೆಂದು, ಶ್ರೀಯುತ ಲೋಕೋಪಯೋಗಿ ಸಚಿವರಾದಂತಹ ಸತೀಶ್ ಜಾರಕಿಹೊಳಿ, ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ವರದಿ :-ಅಭಿಷೇಕ್ ಜೆಎಂ