Join The Telegram | Join The WhatsApp |
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನ ಮೇಲೆ, ತಾಲ್ಲೂಕಿನ ಕಣಬರ್ಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಮುಂಭಾಗದ ಗಾಜುಗಳು, ಕಿಟಕಿಗಳು ಪುಡಿಯಾಗಿವೆ. ಬೆಳಗಾವಿಯಿಂದ ಗೋಕಾಕ ತಾಲ್ಲೂಕಿನ ಶೀಗಿಹಳ್ಳಿಗೆ ಬಸ್ ಹೊರಟಿತ್ತು. ಮಾರ್ಗ ಮಧ್ಯೆ ಬಸ್ಸಿಗೆ ಅಡ್ಡಹಾಕಿದ ಕೀಡಿಗೇಡಿಗಳು ಕಲ್ಲು ತೂರಿದರು ಎಂದು ವಾಹನದಲ್ಲಿದ್ದವರು ತಿಳಿಸಿದ್ದಾರೆ. ಹಾನಿಗೊಳಗಾದ ಬಸ್ಸನ್ನು ಅಧಿಕಾರಿಗಳು ಮೂರನೇ ಡಿಪೊಗೆ ತಂದು ನಿಲ್ಲಿಸಿದರು. ಬಸ್ಸಿನ ಫೋಟೊ, ವಿಡಿಯೊ ದೃಶ್ಯ ಸೆರೆಹಿಡಿಯಲು ಮಾಧ್ಯಮದವರು ತೆರಳಿದಾಗ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಕಲ್ಲು ಎಸೆದವರು ಎಂಇಎಸ್‌ನವರು ಎಂಬುದೂ ನಮಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದರು.
Join The Telegram | Join The WhatsApp |