Join The Telegram | Join The WhatsApp |
ಬೆಳಗಾವಿ: ನಗರದ ಯುವಕರಲ್ಲಿ ಇಂದು ನಿರುದ್ಯೋಗ ಸಮಸ್ಯ ತಾಂಡವವಾಡುತ್ತಿದ್ದು, ಇದರಿಂದ ಯುವ ಪೀಳಿಗೆ, ಸಮಾಜ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ, ಇದೆಲ್ಲವನ್ನೂ ದೂರ ಮಾಡಲೆಂದೇ ಬೆಳಗಾವಿ ನಗರದಲ್ಲಿ “ಮಿಥಿಕ್ಷಾ” ಎಂಬ ಕಂಪನಿ ಪ್ರಾರಂಭ ಆಗಿದ್ದು ಯುವಸಮೂಹಕ್ಕೆ ಹೊಸ ಆಶಾಕಿರಣ ಆಗಿದೆ..
ಕಂಪನಿಯ ಪದಾಧಿಕಾರಿಗಳು ನಗರದ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕಂಪನಿಯ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು..
ಈ ವೇಳೆ ಮಾತನಾಡಿದ ಮಿತಿಕ್ಷಾದ ಸಹ ಸಂಸ್ಥಾಪಕಿಯಾದ ಅಶ್ವಿನಿಯವರು, ಗುಣಮಟ್ಟದ ತರಭೇತಿ ಮತ್ತು ಸ್ಥಿರವಾದ ಉದ್ಯೋಗಗಳ ಕೊರತೆಯಿಂದ ಗ್ರಾಮೀಣ ಪ್ರದೇಶದ ಕೌಶಲ್ಯಗಳು ಹಿಂದುಳಿದಿವೆ, ಗ್ರಾಮೀಣ ಭಾರತಕ್ಕೆ ಕೌಸಲ್ಯ ಹೆಚ್ಚಿಸುವ ನಿಟ್ಟಿನಲ್ಲಿ, ಗುಣಮಟ್ಟದ ಶಿಕ್ಷಣ, ಹಾಗೂ ಮಾರ್ಗದರ್ಶನದ ಅವಶ್ಯಕತೆ ತುಂಬಾ ಇದೆ ಎಂದರು..
ಮಿತಿಕ್ಷ್ಯಾ ಪ್ರಾರಂಭವಾಗಿ 90 ದಿನಗಳಲ್ಲಿ 20000ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ, 30 ವಿದ್ಯಾರ್ಥಿಗಳು ಮೊದಲ ಹಂತದ ಕೋರ್ಸ್ ಮುಗಿಸಿದ್ದು, ಅದರಲ್ಲಿ 10% ವಿದ್ಯಾರ್ಥಿಗಳು ಕೋರ್ಸ್ ಮುಗಿಯುವ ಮುನ್ನವೇ ನೇಮಕವಾಗಿದ್ದು, ಮಾಸಿಕ ವೇತನ 20 ಸಾವಿರ ರೂಪಾಯಿ ಇಂದ 80 ಸಾವಿರ ರೂಪಾಯಿ ವರೆಗೆ ಇದೆ ಎಂದರು
ಈ ಸಂಧರ್ಭದಲ್ಲಿ ಮಾಜಿ ಸೈನಿಕ ಲಕ್ಷ್ಮಣ ಡೊಂಗಾಪೂರ್, ಕಾರ್ಮಿಕ ಹಾಗೂ ಮಾನವ ಹಕ್ಕುಗಳ ಘಟಕದ ಜಿಲ್ಲಾಧ್ಯಕ್ಷ, ಕಲ್ಮುದ್ದಿನ ಶಾ ಕೆ ಮಕಂದರ್, ಕರ್ನಾಟಕದ ಐಟಿಐ ಪ್ರಾಂಶುಪಾಲ ಇರ್ಷಾದ್ ಹವಾಲ್ದಾರ್, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ಹಣ್ಣಿಕೆರಿ ಮುಂತಾದವರು ಉಪಸ್ಥಿತಿದ್ದರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |