Join The Telegram | Join The WhatsApp |
ಬೆಳಗಾವಿ: ಬುಧವಾರ ನಗರದ ಸರ್ದಾರ ಮೈದಾನದ ಸುತ್ತಮುತ್ತಲೂ ಜನಸಾಗರವೇ ನೆರೆದಿತ್ತು, ಅದಕ್ಕೆ ಮುಖ್ಯ ಕಾರಣ ಎಂದರೆ, ಶಾಸಕ ಅನಿಲ್ ಬೇನಕೆ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ, ನಿರೀಕ್ಷೆಗೂ ಮೀರಿದಂತೆ ಪ್ರೇಕ್ಷಕರು ಆಗಮಿಸಿ ಕೊನೆಯ ಪಂದ್ಯ ವೀಕ್ಷಿಸಿ ಆನಂದ ಪಡೆದರು..
ಜನೆವರಿ ಆರನೇ ತಾರೀಖಿನಿಂದ ಹದಿನೆಂಟರವರೆಗೆ ಸುಮಾರು 13 ದಿನಗಳ ಕಾಲ ವ್ಯವಸ್ಥಿತವಾಗಿ ನಡೆದ ಈ ಕ್ರಿಕೆಟ್ ಪಂದ್ಯಾವಳಿಯ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ, ಆಟಗಾರರಿಗೆ, ಆಯೋಜಕರಿಗೆ ಉತ್ತಮ ಹೆಸರು ತಂದಿದೆ..
ಕೊನೆಯ ಪಂದ್ಯ ವೀಕ್ಷಿಸಿ, ಬಹುಮಾನ ವಿತರಣೆ ಮಾಡಲು ಬಂದಂತ ಮಹಾಂತೇಶ ಕವಟಗಿಮಠ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ, ಬುಡಾ ಅಧ್ಯಕ್ಷ, ಹಾಗೂ ಹಲವಾರು ನಗರ ಸೇವಕರು ಕ್ರಿಕೆಟ್ ಟ್ರಿಪ್ ಹಾಗೂ ಶಾಸಕ ಅನಿಲ್ ಬೇನಕೆ ಅವರ ಬಗ್ಗೆ ಮಾತನಾಡಿ ಇಂತಯ ದೊಡ್ಡ ಪಂದ್ಯಾವಳಿ ನಡೆಸಿ, ಬೆಳಗಾವಿಯ ಹೆಸರು ರಾಷ್ಟ್ರಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆಯ ಮಾತು ಆಡಿದರು..
ಜನಸಾಗರದ ನಡುವೆಯೇ ಸಿಳ್ಳೆ, ಚಪ್ಪಾಳೆ ಮೂಲಕ ಪ್ರಾರಂಭವಾದ ಅಂತಿಮ ಪಂದ್ಯಗಳಿಗೆ ಶಾಸಕ ಹಾಗೂ ಸ್ಥಳೀಯ ಗಣ್ಯರು ಚಾಲನೆ ನೀಡಿದರು, ರಾಷ್ಟ್ರಗೀತೆ ಹಾಡುವುದರ ಮೂಲಕ, ಟಾಸ್ ಮಾಡಿ, ಪ್ರತಿ ತಂಡಕ್ಕೆ ಶುಭ ಕೋರಿದ ಶಾಸಕರು ಪಂದ್ಯಗಳಿಗೆ ಚಾಲನೆ ನೀಡಿದರು…
ಅಂತಿಮ ಪಂದ್ಯದಲ್ಲಿ ಮುಂಬಯಿಯ ಜೈನ್ ತಂಡ ಹಾಗೂ ಬೆಳಗಾವಿಯ ಮೋಹನ್ ಮೊರೆ ತಂಡ ಸೆಣಸಾಡಿದ್ದು ಅದರಲ್ಲಿ ಮೋಹನ್ ಮೊರೆ ತಂಡ ವಿಜಯಿಯಾಗಿ ಹೊರಹೊಮ್ಮಿದೆ..
ಪಂದ್ಯದ ನಂತರ ಮಾತನಾಡಿದ ಶಾಸಕ ಅನಿಲ್ ಬೇನಕೆ ಅವರು, ಮೊದಲನೇ ದಿನದಿಂದ ಈ ಕೊನೆಯ ದಿನದವರೆಗೆ ಪಂದ್ಯಾವಳಿ ವ್ಯವಸ್ಥಿತವಾಗಿ ನಡೆಯಲು ಸಹಕರಿಸಿದ ಬೆಳಗಾವಿ ಪೊಲೀಸ್ ಇಲಾಖೆಗೆ ತುಂಬಾ ಧನ್ಯವಾದ ಎಂದರು..
ಎಲ್ಲಾ ಆಟಗಾರರಿಗೆ ಶುಭಾಶಯ ತಿಳಿಸಿ, ಬೆಳಗಾವಿಯ ಎಲ್ಲಾ ಜನರು ಬಂದು ವೀಕ್ಷಿಸಿ ಈ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ ಎಂದರು, ಮುಂದೆ ಕೂಡಾ ಜನತೆಯ ಸಹಕಾರ ಹೀಗೆ ಇದ್ದರೆ, ಮುಂದಿನ ವರ್ಷ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಪಂದ್ಯಾವಳಿ ನಡೆಸುವುದಾಗಿ ಹೇಳಿದರು..
ಇದೆ ವೇಳೆ ಆಟಗಾರರು ಮಾತನಾಡಿ ಇಂತಹ ವಾತಾವರಣದಲ್ಲಿ ಆಡುವುದು ತುಂಬಾ ಖುಷಿ ಕೊಡುತ್ತದೆ, ಇಂತಾ ಅದ್ಭುತ ಟೂರ್ನಮೆಂಟ್ ಆಯೋಜನೆ ಮಾಡಿದ ಶಾಸಕರಿಗೆ ಧನ್ಯವಾದ ಎಂದು ತಮ್ಮ ಅನಿಸಿಕೆ ತಿಳಿಸಿದರು..
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |