ಬೆಂಗಳೂರು: ಪೀಣ್ಯ ದಾಸರಹಳ್ಳಿ ಕ್ಷೇತ್ರದ ನೆಲಗದರನಹಳ್ಳಿ ನಿಸರ್ಗ ಶಾಲಾ ಆವರಣದಲ್ಲಿ ಕ್ಷೇತ್ರದ ಜನತೆಗೆ ಹಾಗೂ ನಾಡಿನ ಒಳಿತಿಗಾಗಿ ಪೂಜಾ ಪುನಸ್ಕಾರ ಶ್ರದ್ದಾ ಭಕ್ತಿಯಿಂದ ಬೃಹದಾಕಾರದ ವಿಘ್ನ ವಿನಾಯಕನನ್ನು ಪ್ರತಿಷ್ಠಾಪಿಸಿ ಹಲವಾರು ಕಲಾತಂಡಗಳೊಡನೆ ಸಾವಿರಾರು ಭಕ್ತ ಸಾಗರದೊಂದಿಗೆ ಸಿಡಿ ಮದ್ದುಗಳೊಂದಿಗೆ ಗಣೇಶನ ಐತಿಹಾಸಿಕ ಶೋಭಾ ಯಾತ್ರೆಗೆ ಶಾಸಕ ಎಸ್ ಮುನಿರಾಜು ಚಾಲನೆ ನೀಡಿದರು.
ನಂತರ ಅವರು ಪೂರ್ವಜರು ಹಿರಿಯರು ರಾಜಕಾರಣಿಗಳು ಹಿಂದುಗಳನ್ನು ಒಗ್ಗೂಡಿಸುವ ಸಲುವಾಗಿ ಮತ್ತು ನಮ್ಮ ದೇಶದ ಒಳತಿಗಾಗಿ ಗಣೇಶ ಮೂರ್ತಿಯ ಸಮಾರಂಭಗಳನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ ಹಿಂದುಗಳಾದ ನಾವುಗಳು ಯಾವುದೇ ಸಭೆ ಸಮಾರಂಭಗಳು ಮತ್ತು ಮಂಗಳ ಕಾರ್ಯಗಳು ಮಾಡಬೇಕೆಂದರೆ ಪ್ರಪ್ರಥಮ ಗಣೇಶ್ ನ ನೆನೆದು ಕೊಂಡು ಪೂಜೆ ಪುನಸ್ಕಾರಗಳನ್ನು ಮಾಡುವುದರೊಂದಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವ ನಾಗರೀಕರಿಗೂ ವಿಘ್ನ ವಿನಾಯಕನು ಸುಖ-ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಇದೆ ವೇಳೆ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್ಆರ್ ಪ್ರಕಾಶ್ ಅವರು ಗಣೇಶನ ಪ್ರಸಾದ ಲಡ್ಡುವಿಗೆ ಸುಮಾರು 5 ಲಕ್ಷ 25 ಸಾವಿರ ರೂಪಾಯಿಗಳಿಗೆ ಹರಾಜು ಕೂಗಿ ವಿಘ್ನ ವಿನಾಶಕನ ಪ್ರಸಾದ ಲಡ್ಡುವನ್ನು ಅವರಿಗೆ ಹಸ್ತಾಂತರಿಸಿ ಮುಂದಿನ ದಿನಗಳಲ್ಲಿ ಪ್ರಕಾಶ್ ಅವರಿಗೆ ಜನ ಸೇವೆ ಮಾಡಲು ಗಣೇಶನ ಮತ್ತು ತಮ್ಮೇಲ್ಲರ ಆಶೀರ್ವಾದ ಕೆಲಸ ಮಾಡಲು ಗಣೇಶ ಶಕ್ತಿ ನೀಡಲಿ ಎಂದು ಶುಭ ಹಾರೈಸಿ ನೆರೆದಿದ್ದ ಜನಸಾಗರ ಉದ್ದೇಶಿಸಿ ಮಾತನಾಡಿ ಶಾಸಕ ಎಸ್ ಮುನಿರಾಜು ಮಾತಾಡಿದರು.
ನೆಲಗದರನಳ್ಳಿಯಿಂದ ಪ್ರಾರಂಭಗೊಂಡು ಕೈಗಾರಿಕಾ ಪ್ರದೇಶ, ಗಣಪತಿನಗರ, ರಾಜಗೋಪಾಲನಗರ ಮುಖ್ಯ ರಸ್ತೆ, ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಕ್ರಾಸ್ನಲ್ಲಿ ವಿನಾಯಕನ ಪ್ರಸಾದ ಲಾಡು ಹರಾಜು ಕೂಗಲಾಯಿತು ಹಾರಾಜಿನಲ್ಲಿ ಸುಮಾರು ಭಕ್ತಾದಿಗಳು ಲಕ್ಷಗಟ್ಟಲೆ ಹರಾಜು ಕೂಗಿದರು ಸಾವಿರಾರು ಭಕ್ತ ಸಮೂಹದೊಂದಿಗೆ ಶೋಭಾ ಯಾತ್ರೆಯ ಮೆರವಣಿಗೆ ಸುಂಕದಕಟ್ಟೆ ವಿಘ್ನೇಶ್ವರ ನಗರ ಮತ್ತು ಮಾಗಡಿ ರಸ್ತೆವರೆಗೆ ಮೆರವಣಿ ಮೂಲಕ ಸುಮಾರು ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಈ ಶೋಭಾ ಯಾತ್ರೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್ ಎನ್ ಗಂಗಾಧರ್, ಕಣ್ಣಪ್ಪ, ಕೃಷ್ಣಯ್ಯ,ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಎಚ್ ಆರ್ ಪ್ರಕಾಶ್ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ ಯುವ ಮೋರ್ಚಾ ಅಧ್ಯಕ್ಷ ಸತೀಶ್ ಜೆವಿಎಸ್,ರಾಜಗೋಪಾಲನಗರ ವಾರ್ಡಿನ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್,ಮಾಜಿ ಅಧ್ಯಕ್ಷ ನಾಗೇಶ್, ಪ್ರದಾನ ಕಾರ್ಯದರ್ಶಿ ಮೋಹನ್ ಕುಮಾರ್, ಶೇಂಗಾ ನಾಡು ಹಿತರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ತಿಮ್ಮರಾಜ್ ಗೌಡ,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ, ಶ್ರೀನಿವಾಸ್ ಜೆವಿಎಸ್,ಲಾರಿ ಮುನಿರಾಜು, ಕೆಂಪರಾಜು ನಿಸರ್ಗ, ಯುವ ಮುಖಂಡ ಗುರುನಿಕ್ಷಲ್, ಸೌಂದರ್ಯ ಭಾರತ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ದಿನೇಶ್, ಪ್ರದಾನ ಕಾರ್ಯದರ್ಶಿ ವಿನೋದ್ ಗೌಡ, ಈಶ್ವರ್, ಲಕ್ಷ್ಮಣಪ್ಪ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಸಾವಿರಾರು ಸಾರ್ವಜನಿಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು
ವರದಿಗಾರರು ಅಯ್ಯಣ್ಣ ಮಾಸ್ಟರ್