Ad imageAd image

ಚೇಳೂರು ವಿದ್ಯಾರ್ಥಿ ನಿಲಯಕ್ಕೆ ಶಾಸಕರಿಂದ ಚಾಲನೆ

Bharath Vaibhav
ಚೇಳೂರು ವಿದ್ಯಾರ್ಥಿ ನಿಲಯಕ್ಕೆ ಶಾಸಕರಿಂದ ಚಾಲನೆ
WhatsApp Group Join Now
Telegram Group Join Now

ಚೇಳೂರು : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯಗಳು ಇದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವ ಜೊತೆಗೆ, ಸರ್ಕಾರ ನೀಡುವ ಸೌಲಭ್ಯ ವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸ ಕೊಳ್ಳಬೇಕು ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಸಲಹೆ ನೀಡಿದರು.

ತಾಲೂಕಿನ ಪಟ್ಟಣದ ತಾಲೂಕು ಕಚೇರಿ ಪಕ್ಕದಲ್ಲಿ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶಾಸಕರು ಮಂಜೂರು ಮಾಡಿಸಿರುವ ೧೦೦ ವಿದ್ಯಾರ್ಥಿಗಳ ಸಂಖ್ಯಾ ಬಲದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರಾರಂಭಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು.

ಹಳ್ಳಿಯ ರೈತರ ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆಯಬೇಕಾದರೆ ವಿದ್ಯಾರ್ಥಿ ನಿಲಯಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿರಬೇಕು. ಆಗ ಉತ್ತಮ ಫಲಿತಾಂಶ ಬರಲು ಸಹಾಯವಾಗುತ್ತದೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಸತಿ ನಿಲಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಇತರೆ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಅದರ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ತಾಲೂಕು ಜಿಲ್ಲೆ ರಾಜ್ಯಕ್ಕೆ ಉತ್ತಮ ಹೆಸರು ಗಳಿಸಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಪಿ ಆರ್ ಚಲಂ,dss ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರವಣ,
ಜೆ ಎನ್ ಜಾಲರಿ,ಸುರೇಂದ್ರ,ಕೆಜಿ ವೆಂಕಟರವಣಪ್ಪ,ಗ್ರಾಂ.ಪ.ಅದ್ಯಕ್ಷರು ಕೌಸ್ತರ್, ನಯಾಜ್.ಸಾವುಕಾರ್ ಶ್ರೀನಿವಾಸ್ ರೆಡ್ಡಿ,ಚಂದ್ರ , ಖಾದರ್ ವಲಿ,ಪಿ ಮಂಜುನಾಥ, ಶ್ರೀನಾಥ್ ಹಾಗೂ ಇತರರು ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!